Online Fraud | ಎಜುಕೇಶನ್ ಫಂಡ್ ನೀಡುವುದಾಗಿ 12.28 ಲಕ್ಷ ರೂ. ಮೋಸ

cyber crime 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಎಜುಕೇಶಣ್ ಫಂಡ್ ನೀಡುವುದಾಗಿ ನಂಬಿಸಿ ಹಂತ ಹಂತವಾಗಿ 12.28 ಲಕ್ಷ ರೂಪಾಯಿ ಮೋಸ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಭದ್ರಾವತಿಯ ಮಹಿಳೆಯೊಬ್ಬರು ಮೋಸ ಹೋಗಿದ್ದಾರೆ. ತಮ್ಮ ಮಗಳ ಶಿಕ್ಷಣಕ್ಕೆ ಇನ್‍ಹೆರಿಟೆನ್ಸ್ ಫಂಡ್ ಮೂಲಕ ಎಜುಕೇಶನ್ ಫಂಡ್ ನೀಡುವುದಾಗಿ ನಂಬಿಸಿ ಮೋಸ ಮಾಡುವ ಉದ್ದೇಶದಿಂದ ವಿವಿಧ ಕಾರಣಗಳನ್ನು ನೀಡಿ ಕಳೆದ ಆಗಸ್ಟ್ 11ರಿಂದ ಅಕ್ಟೋಬರ್ 17ರ ವರೆಗೆ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು 12,28,200 ರೂ. ಹಣವನ್ನು ಹಾಕಿಸಿಕೊಂಡು ಮೋಸ ಮಾಡಲಾಗಿದೆ.

READ | ರಾಜ್ಯ ಸಂಪುಟದಲ್ಲಿ ಕೋಣಂದೂರಿನ ಬಗ್ಗೆ ಪ್ರಮುಖ ನಿರ್ಧಾರ

ಮೋಸ ಮಾಡಿದ್ದು ಹೇಗೆ?
ಮಗಳಿಗೆ ಯಾರೋ ಅಪರಿಚಿತರು ಇಮೇಳ್ ಮೂಲಕ ಸಂಪರ್ಕಿಸಿ ತಮ್ಮನ್ನು ತಾವು ಚಾರಿಟೆಬಲ್ ಟ್ರಸ್ಟ್‍ನವರೆಂದು ತಿಳಿಸಿದ್ದಾರೆ. ಸಂಸ್ಥೆಯ ವತಿಯಿಂದ ವ್ಯಾಸಾಂಗಕ್ಕಾಗಿ ಇನ್‍ಹೆರಿಟೆನ್ಸ್ ಫಂಡ್ ಮೂಲಕ ಶಿಕ್ಷಣಕ್ಕೆ ಅಗತ್ಯವಿರುವ ಹಣ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿ ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ. ಮೋಸ ಹೋದ ಬಳಿಕ ಮಹಿಳೆಯು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿಕ್ಕ ಸಿಕ್ಕ ಇಮೇಲ್’ಗಳನ್ನು ನಂಬಬೇಡಿ
ಖಾಸಗಿ ಇಮೇಲ್ ವಿಳಾಸಕ್ಕೆ ಬರುವ ಇಮೇಲ್‍ಗಳನ್ನು ನಂಬುವುದಕ್ಕೂ ಮುಂಚೆ ಪರಿಶೀಲನೆ ಮಾಡಬೇಕು. ಯಾವುದನ್ನೂ ಬ್ಲೈಂಡ್ ಆಗಿ ನಂಬಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!