Fake Food Officer | ಬೇಕರಿ, ಹೋಟೆಲ್ ಮಾಲೀಕರೇ ಎಚ್ಚರ! ಇದು ಫೇಕ್ ಫುಡ್ ಆಫಿಸರ್ ಕಥೆ

Fraud

 

 

ಸುದ್ದಿ‌ ಕಣಜ.ಕಾಂ | Crime News
ಶಿವಮೊಗ್ಗ(Shivamogga): ಡೇಟಾ ಆಪರೇಟರ್(dataentry operator)ವೊಬ್ಬ ಸರ್ಕಾರಿ ವಾಹನವನ್ನು ದುರುಪಯೋಗ ಪಡಿಸಿಕೊಂಡು ಹೋಟೆಲ್, ಬೇಕರಿಗಳಲ್ಲಿ‌ ಹಣ ವಸೂಲಿ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ವಾಹನವನ್ನು ಜಪ್ತಿ ಮಾಡಲಾಗಿದ್ದು, ಮೋಸ ಮಾಡಿದ ವ್ಯಕ್ತಿ ಪರಾರಿಯಾಗಿದ್ದಾನೆ.

READ | ‘ಆಪರೇಷನ್ ಕಮಲ’ ಪರ‌ ಕೆ.ಸಿ.ನಾರಾಯಣಗೌಡ ಬ್ಯಾಟಿಂಗ್, ಹೇಳಿದ್ದೇನು?

ಆಹಾರ ಅಂಕಿತ ಅಧಿಕಾರಿ ಕಚೇರಿಯಲ್ಲಿ ಡೇಟಾ ಆಪರೇಟರ್ ಆಗಿ ಕೆಲಸ ಮಾಡುವ ಗಂಗಾಧರ್ ಎಂಬಾತ ಆಹಾರ ಸುರಕ್ಷತಾ ವಿಭಾಗದ ಆಹಾರ ಅಂಕಿತ ಅಧಿಕಾರಿ ಎಂದು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಎಂದು ದೂರಲಾಗಿದೆ.
ಈತ ವಿನೋಬನಗರದ ಬೆಣ್ಣೆದೋಸೆ ಹೋಟೆಲ್, ಗೊರೂರು ಮಾರ್ಟ್’ಗೆ ತೆರಳಿ ಹಣವನ್ನು ವಸೂಲಿ ಮಾಡುತ್ತಿದ್ದು, ಕೃತ್ಯ ಬೆಳಕಿಗೆ ಬಂದಿದ್ದೇ ಆತ ತಲೆಮರೆಸಿಕೊಂಡಿದ್ದಾನೆ.
ಸಿಸಿ ಟಿವಿಯಲ್ಲಿ ಸೆರೆಸಿಕ್ಕ ವಿಡಿಯೋ
ಭಾನುವಾರ ಗೊರೂರು ಮಾರ್ಟಿಗೆ ಇಲಾಖೆಯ ವಾಹನದಲ್ಲಿ ತೆರಳಿದ್ದ ಗಂಗಾಧರ್ ಅವರು ಹಣಕ್ಕಾಗಿ‌ ಬೇಡಿಕೆ ಇಟ್ಟಿದ್ದಾರೆ. ಅಂಗಡಿಯ ಮಾಲೀಕ ಮಾರನೇ ದಿನ ಬರುವಂತೆ ತಿಳಿಸಿದ್ದಾರೆ. ಮಾರನೇ ದಿನ ಬಂದು ಹಣ ನೀಡುವಂತೆ ಕೇಳಿದ್ದಾನೆ. ಇದೆಲ್ಲ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

READ | ಹೋರಿ ತಿವಿದು ಶಿಕಾರಿಪುರದಲ್ಲಿ ಮೂರನೇ ಬಲಿ, ಮೂರು ದಿನಗಳಲ್ಲಿ ಮೂರು ಸಾವು

ಪತ್ರಕರ್ತರು ವಿಚಾರಿಸಿದಾಗ ಗಲಿಬಿಲಿ
ಅಂಗಡಿ‌ ಮಾಲೀಕನಿಗೆ ಹಣ ಕೇಳಲು‌ ಬಂದಾಗ ಕೆಲವು ಪತ್ರಕರ್ತರು ಪ್ರಶ್ನಿಸಿದ್ದಾರೆ. ಆಗ ಅಧಿಕಾರಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯು ಗಲಿಬಿಲಿಗೊಂಡಿದ್ದಾನೆ. ವಿಚಾರಿಸಿದಾಗ ಆಹಾರ ಅಂಕಿತ ಅಧಿಕಾರಿ ಕಚೇರಿಯಲ್ಲಿ ಡೇಟಾಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಅಲ್ಲಿಂದ‌‌ ಪರಾರಿಯಾಗಿದ್ದಾನೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ‌ ನಡೆಯುತ್ತಿದೆ.

error: Content is protected !!