Leopard trap | ಕ್ಯಾತಿನಕೊಪ್ಪದಲ್ಲಿ ಬೋನಿಗೆ ಬಿದ್ದ ಹೆಣ್ಣು ಚಿರತೆ, 2 ವರ್ಷದಲ್ಲಿ ಎರಡು ಚಿರತೆ ಸೆರೆ

leopard kyatinakoppa 1

 

 

HIGHLIGHTS

  • ಕ್ಯಾತಿನಕೊಪ್ಪದಲ್ಲಿ ಎರಡು ವರ್ಷಗಳಲ್ಲಿ ಎರಡು ಚಿರತೆಗಳ ಸೆರೆ
  • ಜಮೀನಿನಲ್ಲಿ‌ ಚಿರತೆಯ ಹೆಜ್ಜೆ ಗುರುತು ಪತ್ತೆ, ಜನರಲ್ಲಿ ಗಾಬರಿ
  • ಅರಣ್ಯ ಇಲಾಖೆಯ ವಿರುದ್ದ ಕೆಂಡಕಾರಿದ ಗ್ರಾಮಸ್ಥರು

ಸುದ್ದಿ ಕಣಜ.ಕಾಂ | DISTRICT | 01 NOV 2022
ಹೊಳೆಹೊನ್ನೂರು (Holehonnur): ಸಮೀಪದ ಕ್ಯಾತಿನಕೊಪ್ಪದಲ್ಲಿ ಹೆಣ್ಣು ಚಿರತೆಯೊಂದು ಭಾನುವಾರ ರಾತ್ರಿ ಬೋನಿಗೆ ಬಿದ್ದಿದೆ.
ಹೊಳಲೂರು ಬಳಿಯ ಕ್ಯಾತಿನಕೊಪ್ಪ, ಸೋಮಿನಕೊಪ್ಪ, ಸುತ್ತುಕೋಟೆ, ಆಲದಹಳ್ಳಿ ಸೇರಿದಂತೆ ಹಲವೆಡೆ ಚಿರತೆ ಓಡಾಟ ಕಂಡುಬಂದಿತ್ತು. ಇದರಿಂದ ಜನ ಭಯಭೀತರಾಗಿದ್ದರು. ನಿರಂತರ ದೂರುಗಳನ್ನು ನೀಡಿದ ಬಳಿಕ ಅರಣ್ಯ ಇಲಾಖೆಯು ಬೋನು ಇಟ್ಟಿತ್ತು. ಅದಕ್ಕೆ ಚಿರತೆ ಬಿದ್ದಿದೆ.

READ | ಶಿಕ್ಷಕಿಯ ಮನೆಯ ಮುಂದೆ ವಾಮಾಚಾರ, ಕಾರಣವೇನು? 

ಎರಡು ವರ್ಷಗಳಲ್ಲಿ ಒಂದೇ ಸ್ಥಳದಲ್ಲಿ ಎರಡು ಚಿರತೆ ಸೆರೆ
ಕ್ಯಾತಿನಕೊಪ್ಪದಲ್ಲಿ ಕಳೆದ ಎರಡು ವರ್ಷಗಳಲ್ಲಿ ಎರಡು ಚಿರತೆಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ಸ್ಥಳದಲ್ಲಿ ಈ ಹಿಂದಯೂ ದೊಡ್ಡ ಗಾತ್ರದ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಭಾನುವಾರ ಸೆರೆಸಿಕ್ಕ ಚಿರತೆಯು ಎರಡು ವರ್ಷದ್ದಾಗಿರಬಹುದು ಎಂದು ಹೇಳಲಾಗಿದೆ.
ಸೆರೆ ಹಿಡಿದ ಚಿರತೆ ಬೇರೆಡೆ ಬಿಡಲು ಆಗ್ರಹ
ಅರಣ್ಯ ಇಲಾಖೆಯು ಸೆರೆ ಹಿಡಿದಿರುವ ಚಿರತೆಯನ್ನು ಬೇರೆಗೆ ಬಿಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ಈಗಾಗಲೇ ಜಮೀನಿನಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅಡಿಕೆ ತೋಟಕ್ಕೆ ಹೋಗುವುದಕ್ಕೂ ಜನ ಭಯ ಪಡುತ್ತಿದ್ದಾರೆ. ಮುಸುಕಿನ ಜೋಳ‌ ಕಟಾವಿಗೆ ಬಂದಿದ್ದು ಚಿರತೆ ಭಯದಿಂದ ರೈತರು ಆ ಕಡೆ ಹೋಗುವುದಕ್ಕೂ ಭಯ ಪಡುತ್ತಿದ್ದಾರೆ. ಆದ್ದರಿಂದ, ಸೆರೆ ಹಿಡಿದ ಚಿರತೆಯನ್ನು ಬೇರೆಡೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ಸ್ಪಂದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮನವಿಯಂತೆ ಬೇರೆಯ ಕಡೆಗೆ ಬಿಡುವ ಭರವಸೆ ನೀಡಿದ್ದಾರೆ.

https://suddikanaja.com/2022/11/01/three-person-died-in-hori-habba-at-shikaripura-and-sorab/

Leave a Reply

Your email address will not be published. Required fields are marked *

error: Content is protected !!