Online Job Fraud | ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ 22 ಲಕ್ಷ ರೂ. ಮೋಸ

online fraud cyber crime

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಹೊಸನಗರ (Hosanagar) ಮೂಲದ ವ್ಯಕ್ತಿಯೊಬ್ಬರಿಗೆ 22.16 ಲಕ್ಷ ರೂಪಾಯಿ ಮೋಸ ಮಾಡಿರುವ ಘಟನೆ ನಡೆದಿದ್ದು, ವಂಚನೆಗೆ ಒಳಗಾದ ವ್ಯಕ್ತಿಯು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

READ | ಡಿಸಿಸಿ ಬ್ಯಾಂಕ್ ಪರೀಕ್ಷೆಯ ಕೀ-ಉತ್ತರ ಪ್ರಕಟ ಆಕ್ಷೇಪಣೆಗಳಿದ್ದರೆ ಸಲ್ಲಿಸಿ 

ಟಾಸ್ಕ್ ನೀಡಿ ಮೋಸ
ಪಶ್ಚಿಮ ಬಂಗಾಳ(west Bengal)ದ ಕಂಪೆನಿ ಎಂದು ಹೇಳಿಕೊಂಡು ವಂಚನೆಗೆ ಒಳಗಾದ ವ್ಯಕ್ತಿಗೆ ಲಿಂಕ್ ಕಳುಹಿಸಲಾಗಿದೆ. ಆ ಜಾಬ್ ಲಿಂಕ್‍ನಲ್ಲಿ ಟಾಸ್ಕ್ ನೀಡಿ ಗೂಡ್ಸ್’ಗಳನ್ನು ಆನ್ ಲೈನ್’ನಲ್ಲಿ ಖರೀದಿ ಮಾಡಿ ಮಾರಾಟ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಅದಕ್ಕೆ ಲಾಭ ನೀಡುವುದಾಗಿ ಹೇಳಿದ್ದರಿಂದ ಅವರು ಸಹ ನಂಬಿದ್ದಾರೆ.
ಉದ್ಯೋಗ ಮಾಡುವುದಕ್ಕೋಸ್ಕರ ಕಳೆದ ಅಕ್ಟೋಬರ್ 4ರಿಂದ ನವೆಂಬರ್ 11ರ ವರೆಗೆ ವಿವಿಧ ಟಾಸ್ಕ್ ಗಳನ್ನು ನೀಡಲಾಗಿದೆ. ದೂರುದಾರರಿಂದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು 22,16,635 ರೂಪಾಯಿ ಹಣವನ್ನು ಹಾಕಿಸಿಕೊಂಡು ಮೋಸ ಮಾಡಲಾಗಿದೆ. ವಂಚಿಸಿದ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!