Person death | ಖಾಸಗಿ ಬಸ್ ನಿಲ್ದಾಣ ಬಳಿ ಸುಸ್ತಾಗಿ ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ‌ ಸಾವು

Dead body

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸಾಗರ ರಸ್ತೆಯ ಅಶೋಕ ಸರ್ಕಲ್ (Ashok Circle) ಖಾಸಗಿ ಬಸ್ ನಿಲ್ದಾಣ ಬಳಿ ನವೆಂಬರ್ 5ರಂದು ಸುಮಾರು 30 ರಿಂದ 35 ವರ್ಷದ ಅಪರಿಚಿತ ವ್ಯಕ್ತಿ ಸುಸ್ತಾಗಿ ಬಿದ್ದಿದ್ದು, ಸಾರ್ವಜನಿಕರು ಆತನನ್ನು ಮೆಗ್ಗಾನ್ ಆಸ್ಪತ್ರೆ(Meggan Hospital)ಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.

READ | ಶಿವಮೊಗ್ಗದ ಕುಗ್ರಾಮಗಳಿಗೂ ಸಿಗಲಿದೆ 4ಜಿ ನೆಟ್ವರ್ಕ್, ಕೇಂದ್ರದಿಂದ 54 ಟವರ್ ಗಳಿಗೆ ಗ್ರೀನ್ ಸಿಗ್ನಲ್

ಮೃತರ ಬಗ್ಗೆ ಪರಿಚಯ, ಮಾಹಿತಿ ಲಭ್ಯವಾದರೆ ಮಾಹಿತಿ ನೀಡಿ
ಮೃತನು ಸುಮಾರು 5 ಅಡಿ 8 ಇಂಚು ಎತ್ತರ ಇದ್ದು, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ತಲೆಯಲ್ಲಿ 6 ಇಂಚು ಉದ್ದದ ಕಪ್ಪು ಕೂದಲು, 4 ಇಂಚು ಉದ್ದದ ಗಡ್ಡ ಬಿಟ್ಟಿರುತ್ತಾನೆ. ಎದೆಯ ಎಡಕಾಲು, ಸೊಂಟ ಹಾಗು ದೇಹದ ಅಲ್ಲಲ್ಲಿ ತುರುಕೆ ಗಾಯದ ಗುರುತು ಇರುತ್ತದೆ. ಮೈಮೇಲೆ ಕಡುನೀಲಿ ಬಣ್ಣದ ತುಂಬು ತೋಳಿನ ಶರ್ಟ್, ಕಂದು ಬಣ್ಣದ ನೈಟ್‍ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟಿ ಪೊಲೀಸ್ ಠಾಣೆ (Doddapete police starion) ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸಬಹುದೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

error: Content is protected !!