Letter to SP | ವಧು ಹುಡುಕಿ ಕೊಡುವಂತೆ ಎಸ್.ಪಿಗೆ ಮನವಿ ಪತ್ರ ನೀಡಿದ ವ್ಯಕ್ತಿ, ಭಾರಿ ವೈರಲ್ ಆಯ್ತು ಲೆಟರ್

marriage

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮದುವೆಗೆ ಹುಡುಗಿ ಹುಡುಕಿ ಕೊಡುವಂತೆ ಕೋರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ವ್ಯಕ್ತಿಯೊಬ್ಬರು ಮನವಿ ಸಲ್ಲಿಸಿದ್ದಾರೆ. ಈ ಲೆಟರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಎಸ್.ಪಿ ಕಚೇರಿಯ ಟಪಾಲು ವಿಭಾಗದಲ್ಲಿ ಪತ್ರವನ್ನು ನೀಡಲಾಗಿದ್ದು, ಅದರಲ್ಲಿ ‘ತಾನು ಭದ್ರಾವತಿಯಲ್ಲಿ ನೆಲೆಸಿದ್ದು, ಈ ಮುಂಚೆ ಬೆಂಗಳೂರಿನ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಕೃಷಿ ಮಾಡುತ್ತಿದ್ದೇನೆ’ ಎಂದು ತಿಳಿಸಲಾಗಿದೆ.

READ | ಟಿಇಟಿ ಅರ್ಹತಾ ಪರೀಕ್ಷೆ ಅಂತಿಮ ಕೀ ಉತ್ತರ ಪ್ರಕಟ, ಫಲಿತಾಂಶ ನೋಡಲು ಕ್ಲಿಕ್ ಮಾಡಿ 

ಭದ್ರಾವತಿಯ ಪ್ರವೀಣ್ ಅವರು ಮದುವೆಗಾಗಿ ಹುಡುಗಿಯನ್ನು ಹುಡುಕಾಡಿದರೂ ಯಾವುದೂ ಸರಿಹೋಗಿಲ್ಲ. ಹೀಗಾಗಿ, ಸಪ್ತಪದಿ ತುಳಿಯಲು ಸಾಧ್ಯವಾಗಿಲ್ಲ. ಹೀಗಾಗಿ, ಸಹಾಯ ಮಾಡುವಂತೆ ಎಸ್.ಪಿ ಅವರಿಗೆ ಕೋರಲಾಗಿದೆ.
ಮನವಿ‌ ಪತ್ರದೊಂದಿಗೆ ದಾಖಲೆ
ಪೊಲೀಸರಿಗೆ ನೀಡಿರುವ ಮನವಿ ಪತ್ರದೊಂದಿಗೆ ಪ್ರವೀಣ್ ಅವರು ಆಧಾರ್ ಕಾರ್ಡ್, ಪಾಸ್ ಬುಕ್’ನ ನಕಲು ಪ್ರತಿಗಳನ್ನು ಲಗತ್ತಿಸಿದ್ದಾರೆ. ಹೆಚ್ಚು ಮಾಹಿತಿ ಬೇಕಿದ್ದರೆ ಯಾರನ್ನು ಸಂಪರ್ಕಿಸಬೇಕೆಂದು ಇಬ್ಬರ ಹೆಸರುಗಳನ್ನು ಸಹ ನಮೂದಿಸಿದ್ದಾರೆ.

READ | ಶಿವಮೊಗ್ಗದ ಇಂದಿನ ಬಿಸಿ ಬಿಸಿ ಸುದ್ದಿಗಳೇನು? TOP 10 ನ್ಯೂಸ್

ಇನ್ ವಾರ್ಡ್ ಸಂಖ್ಯೆ ಹಾಕದ ಪತ್ರ ವೈರಲ್, ಸಿಬ್ಬಂದಿ ಮೇಲೆ ಕ್ರಮ
ವೈರಲ್ ಆಗಿರುವ ಪತ್ರದ ಮೇಲೆ ಇನ್ ವಾರ್ಡ್ ಸಂಖ್ಯೆ ಇಲ್ಲ. ಇದು ಯಾವ ರೀತಿಯಲ್ಲಿ ಲೀಕ್ ಆಗಿದೆ ಎಂಬುವುದು ಇದುವರೆಗೆ ತಿಳಿದುಬಂದಿಲ್ಲ. ಒಂದುವೇಳೆ, ಇನ್ ವಾರ್ಡ್ ಸಂಖ್ಯೆ ಪತ್ರದಲ್ಲಿ‌ ಇದ್ದಿದ್ದರೆ ಸಿಬ್ಬಂದಿ ಸೇಫ್ ಆಗಿರುತ್ತಿದ್ದರು. ಈಗಿನ ಪತ್ರದಲ್ಲಿ ಇನ್ ವಾರ್ಡ್ ಸಂಖ್ಯೆ ಇಲ್ಲ. ಹೀಗಾಗಿ, ಸಂಬಂಧಪಟ್ಟ ಸಿಬ್ಬಂದಿಯ ಮೇಲೆ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.

error: Content is protected !!