Shivamogga central jail | ಸಜಾಬಂಧಿಯ ಒಳ ಉಡುಪಿನಲ್ಲಿ ಗಾಂಜಾ! ಸಿಕ್ಕಿದ್ದು ಹೇಗೆ?

Meggan Hospital

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ಕಾರಾಗೃಹದ ಸಜಾಬಂಧಿಯೊಬ್ಬರು ಒಳ ಉಡುಪಿನಲ್ಲಿ ಗಾಂಜಾ ಬಚ್ಚಿಟ್ಟುಕೊಂಡಿದ್ದು, ತಪಾಸಣೆ ವೇಳೆ‌ ಪತ್ತೆಯಾಗಿದೆ. 
ಕೆ.ಆರ್.ಪುರಂ ನಿವಾಸಿ ಶಾಹೀದ್ ಖುರೇಷಿ ಎಂಬಾತನ ಬಳಿ ಗಾಂಜಾ ಪತ್ತೆಯಾಗಿದೆ. ಈತ ಸೇರಿದಂತೆ ಕೆಲವು ಸಜಾಬಂಧಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಖುರೇಷಿ ಶೌಚಾಲಯಕ್ಕೆ ಹೋಗಿ ಹೊರಗಡೆ ಬರುವಾಗ ಆತನ ಮೇಲೆ ಅನುಮಾನಗೊಂಡು ಪರಿಶೀಲಿಸಿದಾಗ 80 ಗ್ರಾಂ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

READ | ಶಿರಾಳಕೊಪ್ಪ ಗೋಡೆಬರಹ ಕೇಸ್, ಪೊಲೀಸರಿಂದ ಮಹತ್ವದ ವಿಡಿಯೋ ರಿಲೀಸ್ 

ಪತ್ತೆಯಾಗಿದ್ದು ಹೇಗೆ?
ಖುರೇಷಿ ಅನಾರೋಗ್ಯದಿಂದ ಬಳಲುತ್ತಿದ್ದು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ. ತಪಾಸಣೆ ಮಾಡುವಾಗ ಒಳ ಉಡುಪಿನಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ‌ ಎಂದು ಮೂಲಗಳು‌ ತಿಳಿಸಿವೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಕಿ ಮೇಲೆಯೇ ಅಟ್ಯಾಕ್ ಮಾಡಿದ್ದ ಖುರೇಷಿ
ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ್ದ ಖುರೇಷಿ ಜೈಲು ಪಾಲಾಗಿದ್ದ ಎಂದು ತಿಳಿದುಬಂದಿದೆ. ಈತನನ್ನು ಪ್ರಕರಣವೊಂದರ ಸಂಬಂಧ ಬಂಧಿಸಲು ಹೋದಾಗ ದೊಡ್ಡಪೇಟೆ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಆಗ ದೊಡ್ಡಪೇಟೆ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ಗಾಯಗೊಂಡಿದ್ದರು. ತದನಂತರ, ನಡೆದ ಕಾರ್ಯಾಚರಣೆಯಲ್ಲಿ ಕೋಟೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

https://suddikanaja.com/2022/12/05/today-shivamogga-top-5-news/

 

error: Content is protected !!