Covid 19 | ಮತ್ತೆ ಕೊರೋನಾ ನಾಲ್ಕನೇ ಅಲೆ ಆತಂಕ, ಬಿಎಫ್ 7 ಮೂರು ಪ್ರಕರಣ ದೃಢ, ಏನೆಲ್ಲ ಮುನ್ನೆಚ್ಚರಿಕೆ? ರಾಜ್ಯದಲ್ಲಿ ಇಂದು ವಿಶೇಷ ಸಭೆ

Covid 1

 

 

ಸುದ್ದಿ ಕಣಜ.ಕಾಂ ನವದೆಹಲಿ
NEW DELHI: ಭಾರತಕ್ಕೆ ಕೊರೋನಾ ನಾಲ್ಕನೇ ಅಲೆ(corona fourth wave)ಯ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳಿಗೆ ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಶೇಷವಾಗಿ ವಿಮಾನ ನಿಲ್ದಾಣ(airport)ಗಳ ಮೇಲೆ ನಿಗಾ ಇಡಲಾಗಿದ್ದು, ಚೀನಾ(china)ದಿಂದ ಬರುವವರ ತಪಾಸಣೆ ಮಾಡಲಾಗುತ್ತಿದೆ.

READ | ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಇನ್ನಿಲ್ಲ, ಅವರ ಬಗ್ಗೆ ತಿಳಿಯಬೇಕಾದ ವಿಚಾರಗಳಿವು, ಅಮಿತ್ ಶಾ ಸೇರಿ ಗಣ್ಯರ ಸಂತಾಪ, ವಿಶೇಷ ಘಟನೆ ಹಂಚಿಕೊಂಡ ನಾರಾಯಣಗೌಡ

ಚೀನಾ, ಜಪಾನ್(Japan), ದಕ್ಷಿಣ ಕೊರಿಯಾ(south korea), ಫ್ರಾನ್ಸ್ (france) ಅಮೆರಿಕ (america) ಮುಂತಾದ ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಹಬ್ಬುತ್ತಿದ್ದಂತೆಯೇ ಭಾರತ(india)ದಲ್ಲೂ ಕಟ್ಟುನಿಟ್ಟಿನ ಹೆಜ್ಜೆಗಳನ್ನು ಇಡಲಾಗಿದೆ. ಇದು ಹೊಸ ವರ್ಷದ ಆಚರಣೆಯ ಮೇಲೆಯೂ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಕೆಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರು ಉನ್ನತ ಸಭೆ ನಡೆಸಿದ್ದು, ಹಲವು ಸೂಚನೆಗಳನ್ನು ನೀಡಿದ್ದಾರೆ.

  • ಕಡ್ಡಾಯವಾಗಿ ಎಲ್ಲರೂ ಜನಸಂದಣಿ ಸ್ಥಳಗಳಲ್ಲಿ ಮಾಸ್ಕ್ (mask) ಅನ್ನು ಕಡ್ಡಾಯವಾಗಿ ಧರಿಸಬೇಕು.
  • ಜನನಿಬಿಡ ಪ್ರದೇಶಗಳಲ್ಲಿ ಸಾಮಾಜಿಕ ಅಂತರ (social distance) ಕಾಪಾಡಬೇಕು.
  • ರಾಜ್ಯದ ರಾಜಧಾನಿ ಬೆಂಗಳೂರಿ(Bengaluru)ನಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಬಿಬಿಎಂಪಿ (BBMP) ಚಿಂತನೆ ನಡೆಸಿದ್ದು, ಈ ಸಂಬಂಧ ಕೋವಿಡ್ ಸಲಹಾ ಸಮಿತಿ(advisory committee)ಗೆ ಪ್ರಸ್ತಾವನೆ ಕಳುಹಿಸಿದೆ. ಒಪ್ಪಿಗೆ ನೀಡಿದರೆ, ಮಾರುಕಟ್ಟೆ, ಮಾಲ್, ಥಿಯೇಟರ್, ಮೆಟ್ರೋ, ಬಸ್, ರೈಲು, ಬಸ್, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗುವುದು.

ಇಂದು ನಡೆಯಲಿದೆ ವಿಶೇಷ ಸಭೆ
ಹೊರ ದೇಶಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ರಾಜ್ಯದಲ್ಲೂ ಮುನ್ನೆಚ್ಚರಿಕೆಯ ಕ್ರಮಗಳ ಅಗತ್ಯವಿದೆ. ಅದಕ್ಕಾಗಿ, ರಾಜ್ಯ ಸರ್ಕಾರ ಡಿ.22ರಂದು ವಿಶೇಷ ಸಭೆಯನ್ನು ಕರೆದಿದೆ. ಇಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

READ | ಶಿವಮೊಗ್ಗ ರಿಂಗ್ ರೋಡ್ ಕಾಮಗಾರಿಗೆ ಕೇಂದ್ರದ ಬಲ, ಬೈಂದೂರು- ರಾಣೆಬೆನ್ನೂರು ಹೆದ್ದಾರಿ ಅಭಿವೃದ್ಧಿಗೆ ಅನುಮೋದನೆ

ಗುಜರಾತ್, ಒಡಿಶಾದಲ್ಲಿ ಸೋಂಕು ಪತ್ತೆ
ಚೀನಾದಲ್ಲಿ‌ ಸೋ‌ಂಕು ಉಲ್ಬಣಕ್ಕೆ ಕಾರಣವಾಗಿರುವ ಒಮಿಕ್ರಾನ್ ಉಪಪ್ರಭೇದದ ಉಪತಳಿ ಬಿಎಫ್ 7 (SARS- CoV- 2 Omicron BF.7 variant) ಭಾರತದಲ್ಲಿಯೂ ಕಂಡುಬಂದಿದೆ. ಗುಜರಾತ್ ಮತ್ತು ಒಡಿಶಾದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್ ಬಯೋ ಟೆಕ್ನಾಲಜಿ ಸಂಸ್ಥೆ ಅಕ್ಟೋಬರ್‌ನಲ್ಲಿ ಬಿಎಫ್ 7 ಮೊದಲ ಪ್ರಕರಣವನ್ನು ಪತ್ತೆ ಹಚ್ಚಿತ್ತು. ಇದುವರೆಗೆ ಗುಜರಾತ್ ನಲ್ಲಿ ಎರಡು ಮತ್ತು ಒಡಿಶಾದಲ್ಲಿ ಒಂದು ಪ್ರಕರಣ ದೃಢಪಟ್ಟಿದೆ.
ಭಾರತದಲ್ಲಿ 131 ಹೊಸ ಪ್ರಕರಣ
ಭಾರತದಲ್ಲಿ ಬುಧವಾರ ಬೆಳಗ್ಗೆಯವರೆಗೆ 24 ಗಂಟೆ ಅವಧಿಯಲ್ಲಿ ಸೋಂಕಿನ 131 ಹೊಸ ಕೇಸ್’ಗಳು ವರದಿಗಳಾಗಿವೆ. ದೇಶದಲ್ಲಿ ಇದುವರೆಗೆ ಸೋಂಕಿನ ಒಟ್ಟು ಸಂಖ್ಯೆ 4,46,76,330ಕ್ಕೆ ಏರಿಕೆಯಾಗಿದೆ. ಮೂವರು ಹೊಸದಾಗಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯು 5,30,680ಕ್ಕೆ ಏರಿಕೆಯಾಗಿದೆ.

https://suddikanaja.com/2022/12/02/shivamogga-dc-imporant-meeting-on-kyasanur-forest-disease-kfd/

error: Content is protected !!