Sports | ರಾಜ್ಯ ಕ್ರೀಡಾಕೂಟದ ರೈಫಲ್ ಶೂಟಿಂಗ್‍ನಲ್ಲಿ ಶಿವಮೊಗ್ಗದ ಚನ್ನವೀರಪ್ಪ ರನ್ನರ್ ಅಪ್

Channaveerappa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಶನಿವಾರ ಸಂಜೆ ನಡೆದ ಕರ್ನಾಟಕ ರಾಜ್ಯ ಕ್ರೀಡಾಕೂಟದ ರೈಫಲ್ ಶೂಟಿಂಗ್’ನಲ್ಲಿ ಶಿವಮೊಗ್ಗದ ಚನ್ನವೀರಪ್ಪ ಗಾಮನಗಟ್ಟಿ ಅವರು ರನ್ನರ್ ಅಪ್ ಆಗಿ ಕಪ್ ಪಡೆದಿದ್ದಾರೆ.
ನ.27ರಿಂದ ಡಿ.3ರವರೆಗೆ ನಡೆದ ರಾಜ್ಯಮಟ್ಟದ ವೃತ್ತಿ ಸ್ಪರ್ಧೆ ಹಾಗೂ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

READ | ಡಾ.ಧನಂಜಯ ಸರ್ಜಿ ಬಿಜೆಪಿಗೆ ಗ್ರ್ಯಾಂಡ್ ಎಂಟ್ರಿ, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸರ್ಜಿ ಹೇಳಿದ್ದೇನು? 

ಗೃಹರಕ್ಷಕ ದಳದ ಪೂರ್ವ ವಲಯ ಶಿವಮೊಗ್ಗ ಜಿಲ್ಲೆಯಿಂದ ವೃತ್ತಿ ಸ್ಪರ್ಧೆ ರೈಫಲ್ ಶೂಟಿಂಗ್’ನಲ್ಲಿ ಭಾಗವಹಿಸಿದ ಚನ್ನವೀರಪ್ಪ ಗಾಮನಗಟ್ಟಿ ಅವರು 100ಕ್ಕೆ 94 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು.
ಸಮಾರೋಪ ಸಮಾರಂಭದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್, ಡಿಐಜಿಪಿ ಕೆ.ಟಿ.ಬಾಲಕೃಷ್ಣ, ಡಿಸಿಜಿ ರೇಣುಕಾ ಸುಕುಮಾರ್, ಆಕಾಡಮಿ ಕಮಾಂಡೆಂಟ್ ಸಮೀವುಲ್ಲಾ ಖಾನ್ ಉಪಸ್ಥಿತರಿದ್ದರು. ಗೃಹ ರಕ್ಷಕ ದಳದ ಮಹಾ ಸಮಾದೇಷ್ಟ, ಪೊಲೀಸ್ ಮಹಾ ನಿರ್ದೆಶಕ ಡಾ.ಅಮರ್ ಕುಮಾರ್ ಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

error: Content is protected !!