Veer Savarkar | ಸೆಕ್ಷನ್‌ 144 ಏನೆಲ್ಲ ನಿಯಮಗಳು ಅನ್ವಯ?

Shivamogga taluk

 

 

ಸುದ್ದಿ ಕಣಜ.ಕಾಂ | CITY | SECTION 144
ಶಿವಮೊಗ್ಗ: ವೀರ ಸಾವರ್ಕರ್ (veer savarkar) ಫ್ಲೆಕ್ಸ್ ತೆರವುಗೊಳಿಸಿದ ಹಿನ್ನೆಲೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಗರ ವ್ಯಾಪ್ತಿಯಲ್ಲಿ ಆಗಸ್ಟ್ 15ರ ಮಧ್ಯಾಹ್ನ 3 ಗಂಟೆಯಿಂದ 18ರ ರಾತ್ರಿ 10 ಗಂಟೆಯವರೆಗೆ ಈ ಕೆಳಕಂಡ ನಿಬಂಧನೆಗಳನ್ನು ವಿಧಿಸಿ ನಿಷೇದಾಜ್ಞೆಯನ್ನು‌ ಜಾರಿಗೊಳಿಸಿ ಆದೇಶಿಸಲಾಗಿರುತ್ತದೆ.

READ | ಸಾವರ್ಕರ್ ಫ್ಲೆಕ್ಸ್ ಹರಿದ‌‌ ಬೆನ್ನಲ್ಲೇ ನಡೆದ ಬೆಳವಣಿಗೆಗಳೇನು?

ಏನೆಲ್ಲ‌ ನಿಯಮಗಳು ಅನ್ವಯ?

  • 5 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದರ ಮೇಲೆ ನಿರ್ಬಂಧ
  • ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಲಾಗಿದೆ
  • ಯಾವುದೇ ರೀತಿ ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಾಗೂ ಸ್ಫೋಟಕಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಸಂಗ್ರಹಿಸುವುದು ನಿಷೇದಿಸಲಾಗಿದೆ
  • ವ್ಯಕ್ತಿ / ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ / ದಹನ ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ ಹಾಗೂ ಭಿತ್ತಿಚಿತ್ರಗಳನ್ನು ತೋರಿಸುವುದು ನಿಷೇದಿಸಲಾಗಿದೆ.
  • ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನ ಗಂಡಸರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ)
  • ರಾತ್ರಿ 9 ರಿಂದ ಬೆಳಗಿನ ಜಾವ 5 ರವೆಗೆ ದ್ವಿ ಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. (ತುರ್ತು ಸಂದರ್ಭವನ್ನು ಹೊರತುಪಡಿಸಿ)

https://suddikanaja.com/2022/03/15/nehru-road-in-shimoga-city-has-been-installed-by-puneet-rajkumars-flex/

 

Leave a Reply

Your email address will not be published. Required fields are marked *

error: Content is protected !!