ERSS-112  | ಭೀಕರ ಅಪಘಾತ, ಪೊಲೀಸರ 3 ಗಂಟೆಗಳ ಕಾರ್ಯಾಚರಣೆ ಬಳಿಕ ಓಮ್ನಿ ಚಾಲಕ ಸೇಫ್

sagar accident

 

 

ಸುದ್ದಿ ಕಣಜ.ಕಾಂ ಸಾಗರ
SAGAR: ತಾಲೂಕಿನ ಶಿರವಂತೆ ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓಮ್ನಿಯಲ್ಲಿ ಸಿಲುಕಿದ್ದ ಚಾಲಕನನ್ನು ಸತತ ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಿಸಲಾಗಿದೆ.
ಪ್ರವೀಣ್ ಎಂಬುವವರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗೋಸ್ಕರ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

READ | ಎಂಎಡಿಬಿಯಿಂದ ಪ್ರತಿ ಶಾಸಕರಿಗೆ 1 ಕೋಟಿ ರೂ. ಅನುದಾನ, 1370 ಕಾಮಗಾರಿಗಳಿಗೆ ಗ್ರೀನ್ ಸಿಗ್ನಲ್

ನಡೆದಿದ್ದೇನು?
ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶಿರವಂತೆ ಗ್ರಾಮದ ಬಳಿ ಹೊಸನಗರ ಕಡೆಯಿಂದ ಕುಮಟಕ್ಕೆ ಹೋಗುತ್ತಿದ್ದ ಮಾರುತಿ ಓಮ್ನಿ ವಾಹನವು ಅಪಘಾತಕ್ಕೀಡಾಗಿದ್ದು, ಈ ಬಗ್ಗೆ ಇ.ಆರ್.ಎಸ್.ಎಸ್-112 ಸಹಾಯವಾಣಿಗೆ ಕರೆ ಮಾಡಲಾಗಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಕರ್ತವ್ಯದಲ್ಲಿದ್ದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಎಂ.ಬಿ.ಹುಚ್ಚಪ್ಪ ಮತ್ತು ಚಾಲಕ ಸಂದೀಪ್ ಅವರು ಓಮ್ನಿಯಲ್ಲಿ ಚಾಲಕನು ಸಿಲುಕಿಕೊಂಡಿದ್ದ. ಹೊರ ಬರಲು ಸಾಧ್ಯವಾಗದೇ ಇದ್ದುದರಿಂದ ಇ.ಆರ್.ವಿ. ಅಧಿಕಾರಿಗಳು ಕೂಡಲೇ ಸಾಗರ ಟೌನ್ ಗೆ ತೆರಳಿ, ಕಾರು ಮೆಕಾನಿಕ್ ಅನ್ನು ಕರೆದುಕೊಂಡು ಬಂದ್ದಿದ್ದಾರೆ.
ಸತತ ಮೂರು ಗಂಟೆಗಳ ರಕ್ಷಣಾ ಕಾರ್ಯ
ಸ್ಥಳೀಯರೊಂದಿಗೆ ಸೇರಿ ಒಟ್ಟು ಮೂರು ಗಂಟೆಗಳ ಕಾಲ ಯಶಸ್ವಿ ಪ್ರಯತ್ನದೊಂದಿಗೆ ಕಾರಿನಲ್ಲಿ ಸಿಲುಕಿದ್ದ ಚಾಲಕ ಪ್ರವೀಣ್ ಅವರನ್ನು ಓಮ್ನಿಯಿಂದ ಹೊರ ತೆಗೆದು ರಕ್ಷಿಸಲಾಗಿದೆ. ಗಾಯಗೊಂಡಿದ್ದ ಪ್ರವೀಣ್ ಅವರನ್ನು ಚಿಕಿತ್ಸೆ ಸಂಬಂಧ ಕೂಡಲೇ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇ.ಆರ್.ವಿ. ವಾಹನದ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಮಯ ಪ್ರಜ್ಞೆ ಮತ್ತು ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.

https://suddikanaja.com/2022/12/03/gang-arrested-by-kote-police-at-shimoga/

error: Content is protected !!