Health department | ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ, ಆಸ್ಪತ್ರೆಗಳಿಗೂ ಖಡಕ್ ವಾರ್ನಿಂಗ್

Public Notice

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಸಾರ್ವಜನಿಕರು ಹಾಗೂ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

READ | ಶಿವಮೊಗ್ಗ ನಗರದ 5 ರಸ್ತೆಗಳಲ್ಲಿ ಭಾರಿ‌ ವಾಹನಗಳ ಸಂಚಾರ ನಿಷೇಧ‌ ಸಾಧ್ಯತೆ, ಯಾವ್ಯಾವ ಮಾರ್ಗ?

ಜನರು ಇದನ್ನು ಗಮನಿಸಲೇಬೇಕು
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದಂತೆ ಪ್ರತಿಯೊಂದು ಆರೋಗ್ಯ ಸಂಸ್ಥೆಗಳು ನೋಂದಾಯಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದ್ದು, ವಿದ್ಯಾರ್ಹತೆಗೆ ಅನುಗುಣವಾಗಿ ಅಂದರೆ ಆಯುರ್ವೇದ, ಹೋಮಿಯೋಪಥಿ, ಅಲೋಪಥಿ ಇತ್ಯಾದಿ ಪದ್ಧತಿಯಂತೆಯೇ ಚಿಕಿತ್ಸೆ ನೀಡಬೇಕು. ಹಾಗೆಯೇ ಸಾರ್ವಜನಿಕರು ಕೆ.ಪಿ.ಎಂ.ಇ. ಕಾಯ್ದೆಯನ್ವಯ ನೋಂದಾಯಿತ ವ್ಯಕ್ತಿ, ಸಂಸ್ಥೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು.
ಆಸ್ಪತ್ರೆಗಳಿಗೇನು ಸೂಚನೆ?
ಕೆಪಿಎಂಇ ಕಾಯ್ದೆಯ‌ ಅನ್ವಯ ನೋದಾಯಿಸಿಕೊಳ್ಳದ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೋಂದಾಯಿಸಿಕೊಂಡವರು ಕೆಪಿಎಂಇ ನೋಂದಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಕಾಣುವಂತೆ ನಾಮ ಫಲಕದಲ್ಲಿ ಪ್ರಕಟಿಸಬೇಕು ಎಂದು ತಿಳಿಸಲಾಗಿದೆ.

https://suddikanaja.com/2022/12/24/karnataka-state-government-employee-association-president-cs-shadakshari-statement-on-protest-against-nps/

error: Content is protected !!