ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ದ್ವಿಚಕ್ರ ವಾಹನ ಮತ್ತು ಟಾಟಾ ಏಸ್ ಮಧ್ಯೆ ಶನಿವಾರ ಸಂಜೆ ಮುಖಾಮುಕ್ಕಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮತ್ತೊಬ್ಬನಿಗೆ ಸಣ್ಣಪುಟ್ಟ ಪೆಟ್ಟಾಗಿದೆ.
ಇದನ್ನೂ ಓದಿ । ಆಪರೇಷನ್ ಸಲಗ, ಉಂಬ್ಳೇಬೈಲು to ಭದ್ರಾ ಫಾರೆಸ್ಟ್, ಆನೆಗಳ ಚಾಣಾಕ್ಷತನಕ್ಕೆ ಈ ಘಟನೆಯೇ ಸಾಕ್ಷಿ
ಪಟ್ಟಣದ ಸೊರಬ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಸೊರಬ ತಾಲೂಕಿನ ಮಾವಲಿ ಗ್ರಾಮದ ಬಸವರಾಜ್, ಹಿರೇಕೆರೂರು ತಾಲೂಕಿನ ನಾಗರಾಜ್ ಎಂಬುವವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.