Jobs in shivamogga | ಆತ್ಮ ಯೋಜನೆ ಅಡಿ ವಿವಿಧ ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

IMG 20220517 232257 102

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆತ್ಮ ಯೋಜನೆ ಅಡಿ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಸಿಬ್ಬಂದಿ ಸೇವೆ ಪಡೆಯಲು ಪ್ರಸಕ್ತ ಖಾಲಿ ಇರುವ ಮತ್ತು ಆರ್ಥಿಕ ವರ್ಷದಲ್ಲಿ ಹಾಗೂ 2023-24ನೇ ಸಾಲಿಗೆ ಉದ್ಭವಿಸಬಹುದಾಗ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

  • ನೇಮಕಾತಿ ಇಲಾಖೆ- ಕೃಷಿ ಇಲಾಖೆ
  • ಹುದ್ದೆಗಳ ಹೆಸರು- ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ
  • ಹುದ್ದೆಗಳ ಸಂಖ್ಯೆ- 4

ಯಾವ್ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ?
ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ 1 ಹುದ್ದೆ, ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ, 2 ವರ್ಷ ಅನುಭವ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ 3 ಹುದ್ದೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ, 1 ವರ್ಷ ಅನುಭವ ಹೊಂದಿರಬೇಕು.

READ | ಸಕ್ರೆಬೈಲಿನ 4 ಆನೆ ಸೇರಿ ರಾಜ್ಯದ 14 ಆನೆಗಳು ಮಧ್ಯಪ್ರದೇಶಕ್ಕೆ, ಯಾವ್ಯಾವ ಆನೆಗಳ ವರ್ಗಾವಣೆ?

ಅಭ್ಯರ್ಥಿಯ ವಯೋಮಿತಿ 45 ಮೀರಿರಬಾರದು. ಸೂಕ್ತ ವಿದ್ಯಾರ್ಹತೆ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಯೋಜನಾ ನಿರ್ದೇಶಕರು(ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ ಇವರ ಕಚೇರಿಯಲ್ಲಿ ಪಡೆದು ಸವಿವರಗಳೊಂದಿಗೆ ಡಿಸೆಂಬರ್ 17ರೊಳಗೆ ಯೋಜನಾ ನಿರ್ದೇಶಕರು(ಆತ್ಮ) ಮತ್ತು ಜಂಟಿ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ 5777202 ಇಲ್ಲಿ ಸಲ್ಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

https://suddikanaja.com/2022/12/03/teachers-job-in-shivamogga/

error: Content is protected !!