Lokayukta | ಗಮನಿಸಿ, ನಿಮ್ಮೂರಿಗೆ ಬರಲಿದ್ದಾರೆ ಲೋಕಾಯುಕ್ತರು, ಇಲ್ಲಿದೆ ಟೈಂ ಟೇಬಲ್

Lokayukta shivamogga

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ (Karnataka Lokayukta police) ವಿಭಾಗದ ಅಧಿಕಾರಿಗಳು ಕೆಳಕಂಡ ದಿನಾಂಕಗಳಂದು ತಾಲ್ಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆಗಳ ಬಗ್ಗೆ ಅರ್ಜಿ ಸ್ವೀಕಾರ ಮಾಡಲಿದ್ದಾರೆ.
ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ, ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸಬಹುದು.

READ | ಕೇಂದ್ರ ಕಾರಾಗೃಹದಲ್ಲಿ ಮೂರು ಹುದ್ದೆಗಳು ಮಂಜೂರು, ಡಿ.21ರಂದು ನೇರ ಸಂದರ್ಶನ

ಲೋಕಾಯುಕ್ತರ ವೇಳಾಪಟ್ಟಿ

  • ಡಿ.19ರಂದು ಸಾಗರ ತಾಲ್ಲೂಕು ಕಚೇರಿ ಸಭಾಂಗಣ
  • ಡಿ.20ರಂದು ತೀರ್ಥಹಳ್ಳಿ‌ ತಾಲ್ಲೂಕು ಕಚೇರಿ ಸಭಾಂಗಣ
  • ಡಿ.21ರಂದು ಶಿಕಾರಿಪುರ ತಾಲ್ಲೂಕು ಕಚೇರಿ ಸಭಾಂಗಣ
  • ಡಿ.22ರಂದು ಹೊಸನಗರ ತಾಲ್ಲೂಕು ಕಚೇರಿ ಸಭಾಂಗಣ
  • ಡಿ.23ರಂದು ಭದ್ರಾವತಿ ತಾಲ್ಲೂಕು ಕಚೇರಿ ಸಭಾಂಗಣ
  • ಡಿ.28ರಂದು ಸೊರಬ ತಾಲ್ಲೂಕು ಕಚೇರಿ ಸಭಾಂಗಣ

ವೇಳಾಪಟ್ಟಿಯಲ್ಲಿರುವ ಆಯಾ ತಾಲ್ಲೂಕುಗಳಲ್ಲಿ ನಡೆಯುವ ಸಭೆಗೆ ಸಾರ್ವಜನಿಕರು‌ ಆಗಮಿಸಿ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆಯುವಂತೆ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

https://suddikanaja.com/2022/12/16/shivamogga-police-notice-to-install-cctv-camaras-within-15-days/

error: Content is protected !!