ಸುದ್ದಿ ಕಣಜ.ಕಾಂ ಸಾಗರ
SAGAR: ಸಾಗರ ಪಟ್ಟಣದ ಮಹಿಳಾ ಸಮಾಜ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಸಾಗರ ಟೌನ್ ಪೊಲೀಸ್ ಠಾಣೆ(Sagar town police station)ಯಲ್ಲಿ ಪ್ರಕರಣ ದಾಖಲಾಗಿದೆ.
READ | ತಂದೆಯ ಸಾವಾದರೂ ಪರೀಕ್ಷೆ ಬರೆದ ವಿದ್ಯಾರ್ಥಿನಿ, ಇದು ಹೃದಯ ಕಲಕುವ ಘಟನೆ
ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಬ್ಲಾಕ್ ಕಾಂಗ್ರೆಸ್ ಸಮಿತಿ (Block congress committee) ಸಾಗರದ ಪ್ರಧಾನ ಕಾರ್ಯದರ್ಶಿ ಮಹಾಬಲೇಶ ಕೌತಿ ಅವರು 117 ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಾಗರ ಉಪ ವಿಭಾಗಾಧಿಕಾರಿ ಅವರ ಅನುಮತಿ ಪಡೆದಿದ್ದರು. ಇದಕ್ಕೆ ಷರತ್ತು ಬದ್ಧ ಅನುಮತಿಯನ್ನು ಸಹ ನೀಡಲಾಗಿತ್ತು.
ಊಟ ಬಡಿಸಿ ನೀತಿ ಸಂಹಿತಿ ಉಲ್ಲಂಘನೆ
ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಕರ್ತರ ಸಭೆ ನಡೆಯುತ್ತಿರುವಾಗ ಚುನಾವಣಾ ಎಎಸ್.ಟಿ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಸಭೆಯಲ್ಲಿ ಊಟದ ವ್ಯವಸ್ಥೆ ಮಾಡಿ, ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆಂದು ಸಾಗರ ನಗರಸಭೆ ಎಂಸಿಸಿ ನೋಡಲ್ ಅಧಿಕಾರಿ ನೀಡಿದ ದೂರಿನನ್ವಯ ಮಹಾಬಲೇಶ ಕೌತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Kiccha sudeep | ನಟ ಕಿಚ್ಚು ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು, ಆಯೋಗ ಹೇಳಿದ್ದೇನು?