Jobs in shivamogga | ಶಿವಮೊಗ್ಗದಲ್ಲಿ ಶಿಕ್ಷಕರು, ಬೋಧಕರು ಬೇಕಾಗಿದ್ದಾರೆ, ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ 10 ಸಾವಿರ ಸಂಬಳ

teacher

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಾಲಮಂದಿರ ಮತ್ತು ವೀಕ್ಷಣಾಲಯದಲ್ಲಿಬ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಅರೆಕಾಲಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು.

  • ನೇಮಕಾತಿ ಸಂಸ್ಥೆ- ಜಿಲ್ಲಾ ಮಕ್ಕಳ ರಕ್ಷಣಾ ಘಟಕ
  • ಹುದ್ದೆ- ಅರೆಕಾಲಿಕ ಶಿಕ್ಷಕರು/ಬೋಧಕರು
  • ಗೌರವ ಧನ- 10,000 ರೂ.
  • ಕೊನೆಯ ದಿನಾಂಕ- ಡಿಸೆಂಬರ್ 12

ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಕ್ಕಳ ಪಾಲನಾ ಸಂಸ್ಥೆಯಲ್ಲಿನ ಮಕ್ಕಳಿಗೆ ಒದಗಿಸಲಾಗುವ ಆರ್ಥಿಕ ನೆರವಿನಡಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಾಗಿ ಜಿಲ್ಲೆಯ ಬಾಲಕರ/ ಬಾಲಕಿಯರ ಬಾಲಮಂದಿರ ಮತ್ತು ವೀಕ್ಷಣಾಲಯಗಳಲ್ಲಿನ ಮಕ್ಕಳಿಗೆ ಬೋಧಿಸಲು ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ.

READ | ಇಎಸ್‍ಐನಲ್ಲಿ 9 ಹುದ್ದೆಗಳಿಗೆ ನೇರ ಸಂದರ್ಶನ, ನೀವು ಪಾಲ್ಗೊಳ್ಳಿ

ಯಾವ್ಯಾವ ವಿಷಯಕ್ಕೆ ಶಿಕ್ಷಕರ ನೇಮಕ?
ದೈಹಿಕ/ ಯೋಗ, ಸಂಗೀತಾ/ ಕ್ರಾಫ್ಟ್ ಮತ್ತು ಸಮಾಜ ವಿಜ್ಞಾನ, ಆಂಗ್ಲ, ಗಣಿತ ಮತ್ತು ವಿಜ್ಞಾನ ಪಾಠ ಮಾಡುವ ಅರೆಕಾಲಿಕ ಶಿಕ್ಷಕರು/ ಬೋಧಕರ ಸೇವೆಯನ್ನು ಪ್ರತಿ ತಿಂಗಳು 10,000 ರೂ.ರಂತೆ ಗೌರವಧನ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕ ಮಾಡುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಇಲ್ಲಿಗೆ ಸಲ್ಲಿಸಿ
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 100 ಅಡಿರಸ್ತೆ, ಆಲ್ಕೋಳ ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿ.12 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08182-295709 ನ್ನು ಸಂಪರ್ಕಿಸುವುದು.

https://suddikanaja.com/2022/11/28/manager-jobs-in-state-bank-of-india/

error: Content is protected !!