ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮನೆಯ ಚಿಲಕ ಮುರಿದು ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ.
ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ (Honnali) ತಾಲೂಕಿನ ಹರಳಹಳ್ಳಿ ಗ್ರಾಮದ 19 ವರ್ಷದ ಯುವಕ ಬಂಧಿತ. ಆರೋಪಿ ಬಳಿಯಿಂದ ಅಂದಾಜು ಬೆಲೆ ₹40,000 ಮೌಲ್ಯದ 8 ಗ್ರಾಂ ತೂಕದ ಬಂಗಾರದ ಸರ, ₹2800 ನಗದು ಮತ್ತು ಅಂದಾಜು ₹2,500 ಮೌಲ್ಯದ ಒಂದು ಸ್ಮಾರ್ಟ್ ವಾಚ್ ಅನ್ನು ವಶಕ್ಕೆ ಪಡೆಯಲಾಗಿದೆ.
READ | ಮನೆಯ ಬೀಗ ಎಲ್ಲೆಂದರಲ್ಲಿ ಇಡಬೇಕಾದರೆ ಹುಷಾರ್!
ಮನೆಯಲ್ಲಿ ಇಲ್ಲದಾಗ ಘಟನೆ
ಬಿದರೆ ಗ್ರಾಮದ ನಿವಾಸಿ ಪ್ರದೀಪ್ ಎಂಬುವವರು ತಮ್ಮ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಭದ್ರಾವತಿಗೆ ಹೋಗಿದ್ದು, ಜನವರಿ 27 ರಂದು ವಾಪಾಸ್ ಬಂದು ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದು ನೋಡಿದಾಗ, ಯಾರೋ ಕಳ್ಳರು ಅಡುಗೆ ಮನೆಯ ಬಾಗಿಲಿಗೆ ಹಾಕಿದ್ದ ಚಿಲಕವನ್ನು ಮುರಿದು, ಒಳಗೆ ಬಂದು ಬೆಡ್ ರೂಂನ ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ, ನಗದು, ಸ್ಮಾರ್ಟ್ ವಾಚ್ ಕಳ್ಳತನ ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ನೀಡಿದ 24 ಗಂಟೆಯೊಳಗೆ ಅರೆಸ್ಟ್
ಗ್ರಾಮಾಂತರ ಠಾಣೆ ಪಿಐ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ಪಿಎಸ್ಐ ರಮೇಶ್, ಸಿಬ್ಬಂದಿ ಗೀತಾ, ಚಿನ್ನ ನಾಯ್ಕ್, ಶಿವರಾಜ್ ನಾಯ್ಕ, ಆಂಜನೇಯ ಮಾದರ್ ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದೆ.