Power cut | ಎರಡು ದಿನ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

POWER CUT 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರ ಉಪ ವಿಭಾಗ 2 ರ ಘಟಕ 5 ಮತ್ತು 6 ರ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಕೆಲಸ ಇರುವ ಕಾರಣ ಎಂಎಫ್ 2 ಗೋಪಿಶೆಟ್ಟಿಕೊಪ್ಪ 11 ಕೆವಿ ಮಾರ್ಗದಲ್ಲಿ ಜ.27 ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಇಲಿಯಾಜ್ ನಗರ, ತುಂಗಾನಗರ, ಮಲ್ಲಿಕಾರ್ಜುನ ಬಡಾವಣೆ, ಗೋಪಿಶೆಟ್ಟಿಕೊಪ್ಪ, ಖಾಜಿನ ನಗರ, 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ | ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ನೀರು, ಎಚ್ಚರಿಕೆಯಿಂದರಲು ಸೂಚನೆ

ಜ.28 ರಂದು ಪವರ್ ಕಟ್
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್ 5 ರಲ್ಲಿ ಜ.28 ರಂದು ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್‍ಐಸಿ ಆಫೀಸ್, ತೆರಿಗೆ ಕಚೇರಿ, ಗೋಪಾಳ ಮುಖ್ಯರಸ್ತೆ, ಮೋರ್ ಅಕ್ಕಪಕ್ಕ, ಗೋಪಾಳ ಎ, ಬಿ, ಸಿ, ಡಿ, ಇ ಮತ್ತು ಎಫ್ ಬ್ಲಾಕ್, ಕೆಎಚ್‍ಬಿ ಎಲ್‍ಐಜಿ, ಎಂಐಜಿ ಅಲ್‍ಹರೀಮ್ ಲೇಔಟ್, 100 ಅಡಿ ರಸ್ತೆ, ಪೆಟ್ರೋಲ್ ಬಂಕ್, ವಾಣಿಜ್ಯ ತೆರಿಗೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!