Parking restrict | ಸಾಗರ ಮಾರಿಕಾಂಬ ಜಾತ್ರಾ ಮಹೋತ್ಸವ ಹಿನ್ನೆಲೆ ವಾಹನ ನಿಲುಗಡೆ ನಿಷೇಧ, ಯಾವ್ಯಾವ ಮಾರ್ಗಗಳಲ್ಲಿ ನಿಯಮ ಅನ್ವಯ?

SAGAR Taluk

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಸಾಗರ ನಗರದಲ್ಲಿ ಪ್ರಸಿದ್ಧ ಮಾರಿಕಾಂಬ ಜಾತ್ರಾ ಮಹೋತ್ಸವ(Marikamba Jatre)ವು ಫೆ.7 ರಿಂದ ಫೆ.15 ರವರೆಗೆ ನಡೆಯಲಿದ್ದು ವಾಹನ ನಿಲುಗಡೆ ನಿಷೇಧ ಹಾಗೂ ಪಾರ್ಕಿಂಗ್ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಇವರು ಈ ಕೆಳಕಂಡಂತೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.

READ | ನಾಳೆಯಿಂದ ಸಾಗರ ಶ್ರೀ ಮಾರಿಕಾಂಬ ಜಾತ್ರೆ ಧಾರ್ಮಿಕ ಪೂಜೆ ಆರಂಭ, ಯಾವ ದಿನ‌ ಏನು ವಿಶೇಷ?

ಯಾವ್ಯಾವ ರಸ್ತೆಗಳಲ್ಲಿ ಸಂಚಾರ ನಿಷೇಧ?

  • ಸಾಗರ ಪೇಟೆ ಪೊಲೀಸ್ ಠಾಣೆ ಎದುರಿನ ಜೆ.ಸಿ. ವೃತ್ತದಿಂದ ಜೆ.ಸಿ. ರಸ್ತೆ ಮೂಲಕ ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ವೃತ್ತದವರೆಗೆ ಎರಡೂ ಕಡೆ ಹೋಗಿ ಬರುವ ವಾಹನಗಳನ್ನು ನಿಷೇಧಿಸಲಾಗಿದೆ.
  • ಅಂಬೇಡ್ಕರ್ ವೃತ್ತದಿಂದ ಸಾಗರ ಸರ್ಕಲ್‍ವರೆಗೆ ವಾಹನ ಸಂಚಾರ ನಿಷೇಧಿಸಿದೆ. ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಸರ್ಕಲ್‍ನಿಂದ ಸಾಗರ ಸರ್ಕಲ್‍ವರೆಗೆ ವಾಹನ ಸಂಚಾರ ನಿಷೇಧಿಸಿದೆ.
  • ದುರ್ಗಾಂಬ ವೃತ್ತ ಮೂಲಕ ಸೊರಬ ರಸ್ತೆ ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್.ವೃತ್ತದವರೆಗೆ ಎಲ್ಲ ಮಾದರಿ ವಾಹನ ನಿಲುಗಡೆಯನ್ನು ಮತ್ತು ಎಲ್ಲ ಮಾದರಿಯ ಸರಕು ವಾಹನಗಳನ್ನು ನಿಷೇಧಿಸಲಾಗಿದೆ.

ಈ ಎಲ್ಲ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತು ಪಡಿಸಲಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

error: Content is protected !!