ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ ಹಾಗೂ ಕನೆಕ್ಟಿಂಗ್ ಎಜುಕೇಷನ್ ಆ್ಯಂಡ್ ಎಂಟರ್ಪ್ರೈಸಸ್ ಸಹಯೋಗದೊಂದಿಗೆ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಾಬ್ ಫೆರ್’ನಲ್ಲಿ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದರು.
ಜಾಬ್ ಫೇರ್’ನಲ್ಲಿ 3,676 ಹೆಸರು ನೋಂದಾಯಿಸಿದ್ದು, 1,918 ಅಭ್ಯರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 634 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದು, ಆಯ್ಕೆಯ ಅಂತಿಮ ಹಂತಕ್ಕೆ ತಲುಪಿದ್ದಾರೆ.
ಶೇ.56ರಷ್ಟು ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಉದ್ಯೋಗ ಗಿಟ್ಟಿಸಿಕೊಂಡವರಿಗೆ ಮಾಸಿಕ ₹12000ರಿಂದ ₹38000 ವೇತನ ಲಭಿಸಲಿದೆ.
READ | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಸಂಸದ ರಾಘವೇಂದ್ರ ಹೇಳಿದ್ದೇನು?
ದೇಶ ಮುಂದುವರಿಯಲು ಹೂಡಿಕೆ ಹೆಚ್ಚಾಗಬೇಕು
ಉದ್ಯೋಗ ಪ್ರಪಂಚದ ಅಭಿವೃದ್ಧಿಗೆ ಸಾಕಷ್ಟು ಉತ್ತೇಜನ ನೀಡುತ್ತದೆ. ಯಾವ ದೇಶ ಹಾಗೂ ಅಲ್ಲಿನ ಸಮಾಜ ಮುಂದುವರಿಯಬೇಕೊ ಆ ದೇಶದಲ್ಲಿ ಹೂಡಿಕೆ ಹೆಚ್ಚಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವಿರಭದ್ರಪ್ಪ ಅಭಿಪ್ರಾಯಪಟ್ಟರು.
ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹಸಿವು, ನಿರ್ಗತಿಕ ಹಾಗೂ ದಾರಿದ್ರ್ಯ ತೊಲಗಿ ಇವೆರೆಲ್ಲರ ನಾನು ಬೆಳವಣಿಗೆ ನೋಡಬೇಕು. ಆ ಯಶಸ್ವಿಯ ಭಾಗವಹಿಸಿಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಅದರಂತೆಯೇ ಈಗ ಮೋದಿ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಒಬ್ಬರಿಗೆ ಕೆಲಸ ನೀಡಬೇಕೆಂದು ಹೇಳುವ ಮೂಲಕ ದೇಶದಲ್ಲಿ ನಿರುದ್ಯೋಗ ತೊಡೆದು ಹಾಕುವಲ್ಲಿ ಮುಂದಾಗಿದ್ದಾರೆ ಎಂದರು.
ಗಾಂಧಿ ಕಂಡ ಕನಸನ್ನು ಸಾಕಾರಗೊಳಿಸುವಲ್ಲಿ ಪ್ರಧಾನಿ ಮೋದಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉದ್ಯೋಗ ಆಕಾಂಕ್ಷಿಗಳು ಸಾರ್ವಜನಿಕರು ಸೇವೆಯನ್ನು ಅರಸಿ ಈಗಾಗಲೇ ಸಾಕಷ್ಟು ಸಮಯ ಹಾಳು ಮಾಡಿಕೊಂಡಿದ್ದಾರೆ. ಅವರ ಬದುಕನ್ನು ಮತ್ತೇ ಉತ್ತೇಜಿಸಲು ಈ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಕುವೆಂಪು ವಿವಿ ಆಶಾ ಕಿರಣವಾಗಿದೆ ಎಂದರು.
ಯುವಪೀಳಿಗೆ ಗೋಡೆ ದಾಟಿ ಮುಂದೆ ಬರಲಿ
ಇತ್ತೀಚೆಗೆ ಯುವ ಜನತೆ ಗೋಡೆಗಳು ಮಧ್ಯೆಯೇ ಬೆಳೆದು ವಿಶ್ವವನ್ನು ಅರ್ಥ ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದ ಆಚೆ ಬಂದಾಗ ಮಾತ್ರ ಈ ಜಗತ್ತು ಏನೆಂದು ಅರ್ಥ ಆಗುತ್ತದೆ. ವಿದ್ಯಾರ್ಥಿ ಗಳು ಜಗದಗಲ ಮುಗಿದಗಲ ಬೆಳೆಯಬೇಕು. ಇದಕ್ಕೆ ನಮ್ಮ ವಿವಿ ಸದಾ ಸಹಕಾರ ನೀಡುತ್ತಿದೆ. ಕೋವಿಡ್ ನಿಂದ ಕಳೆದುಕೊಂಡ ಅವಕಾಶವು ಈಗ ಉದ್ಯೋಗ ಮೇಳ ಮುಖಾಂತರ ನಿಮ್ಮಮುಂದೆ ಇದೆ. ಈ ಅವಕಾಶವನ್ನು ಬೆಳೆಸಿಕೊಳ್ಳಬೇಕು ಎಂದರು.
READ | ಶಿಮುಲ್ ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ
ಇಲ್ಲಿ ಎಲ್ಲರೂ ಉದ್ಯೋಗಾಕಾಂಕ್ಷಿಗಳೇ ಆದರೆ ಅದನ್ನು ಪಡೆಯಲು ಶ್ರಮ ವಹಿಸಬೇಕು. ಜಗತ್ತಿನಾದ್ಯಂತ ಸಾಕಷ್ಟು ಕಂಪನಿಗಳಿವೆ. ಅದನ್ನು ಪಡೆಯುವಲ್ಲಿ ಕೌಶಲವನ್ನೂ ಕರಗತ ಮಾಡಿಕೊಳ್ಳಬೇಕು. ಉದ್ಯೋಗ ಮೇಳದಲ್ಲಿ 30 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಉದ್ಯೋಗ ಮೇಳ ಇಷ್ಟಕ್ಕೆ ಮಾತ್ರ ಸಿಮೀತವಾಗದೆ ಮುಂದಿನ ದಿನಗಳು 100 ಕಂಪನಿಗಳು ಒಳಗೊಂಡಂತೆ ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿ ಗಳು ಯಾವುದಕ್ಕೂ ಸಿಮೀತವಾಗದೆ ಕೃಷಿ, ಕೈಗಾರಿಕಾ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಬಲಾಢ್ಯ ದೇಶವನ್ನು ಕಟ್ಟಲು ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಪ್ರಾಂಶುಪಾಲ ಪ್ರೊ.ಕೆ.ಬಿ ಧನಂಜಯ, ಕುವೆಂಪು ವಿವಿ ಪ್ಲೇಸ್ ಮೆಂಟ್ ಅಧಿಕಾರಿಗಳು ಡಾ.ಕೆ.ಆರ್.ಮಂಜುನಾಥ್, ವಾಣಿಜ್ಯ ಹಾಗೂ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಎಂಕೆ. ವೀಣಾ, ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಎನ್. ರಾಜೇಶ್ವರಿ ಇನ್ನಿತರರಿದ್ದರು.
https://suddikanaja.com/2023/02/03/science-museum-at-sahyadri-college-shivamogga/