Shivamogga Airport | ಎಎ ವೃತ್ತದಲ್ಲಿ ಬಂದಿಳಿದ ವಿಮಾನ! ಗೋಪಿ ವೃತ್ತದಲ್ಲಿ‌ ಏರ್ ಪೋರ್ಟ್ ಮಾಡಲ್, ಸೆಲ್ಫಿಗಾಗಿ ಜ‌ನವೋ‌ ಜನ

AA Circle airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಮಾನ ನಿಲ್ದಾಣ ಉದ್ಘಾಟನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ನಡುವೆ ಬಿಜೆಪಿಯಿಂದಲೂ ನಗರದಾದ್ಯಂತ ಬಂಟಿಂಗ್ಸ್ ಗಳನ್ನು ಕಟ್ಟಲಾಗಿದೆ. ಸಿಟಿ ಸೆಂಟರ್ ಮಾಲ್ ಆವೃತ್ತವಾಗುವಂತೆ ಜಾಹೀರಾತು ಫಲಕ ಹಾಕಲಾಗಿದೆ. ಸರ್ಕ್ಯೂಟ್ ಹೌಸ್ ವೃತ್ತದಲ್ಲಿ ಕಮಲಾಕಾರದ ಕಲಾಕೃತಿಯನ್ನು ತಯಾರಿಸಲಾಗಿದೆ.

READ | ಫೆ.26ರಿಂದ 2 ದಿನ KSRTC ಬಸ್ ಸಂಚಾರದಲ್ಲಿ ವ್ಯತ್ಯಯ, ಕಾರಣವೇನು?

ವಿಮಾನ ಟೇಕ್ ಆಫ್ ಮಾದರಿ
ಅಮೀರ್ ಅಹಮದ್ ವೃತ್ತದಲ್ಲಿ ಟೇಕ್ ಆಫ್ ಆಗುವ ವಿಮಾನದ ಮಾದರಿಯನ್ನು ಇರಿಸಿದ್ದಾರೆ. ಇದನ್ನು ವೀಕ್ಷಿಸಿ ಜನರು ಫೋಟೊ ಕ್ಲಿಕ್ಕಿಸಿಕೊಂಡರು. ಗೋಪಿ ವೃತ್ತದಲ್ಲಿ‌ ವಿಮಾನ ನಿಲ್ದಾಣದ ಕಲಾಕೃತಿಯನ್ನು‌‌ ಇರಿಸಲಾಗಿದೆ.
ನಾಳೆ ಪ್ರಧಾನಿ ಮೋದಿ ಆಗಮನ
ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆ.27ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಸ್ವಾಗತಕ್ಕೆ ಬಿಜೆಪಿಯಿಂದ ಗಾಂಧಿ ಬಜಾರ್ ಬಳಿ ಬಿಜೆಪಿ ಬಿ.ಎಚ್.ರಸ್ತೆ, ನೆಹರೂ ರಸ್ತೆ, ವಿದ್ಯಾನಗರದಲ್ಲಿ ಬಿ.ಎಚ್.ರಸ್ತೆ, ಎಲ್ಲಾ ಪ್ರಮುಖ ವೃತ್ತಗಳಲ್ಲಿ ಬಿಜೆಪಿ ಧ್ವಜ, ಬಂಟಿಂಗ್ಸ್, ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಎಲ್ಲೆಲ್ಲೂ ವಿಮಾನ ನಿಲ್ದಾಣ ಉದ್ಘಾಟನೆಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ.

Shivamogga airport | ವಿಮಾನ ನಿಲ್ದಾಣ ಉದ್ಘಾಟನೆಗೆ ಬರುವವರು ಏನು‌ ತರಬೇಕು, ಏನು ತರಬಾರದು? ಹೆಣ್ಮಕ್ಕಳು ಬ್ಯಾಗ್ ಕೂಡ ತರುವಂತಿಲ್ಲ

error: Content is protected !!