Shivamogga Airport | ಶಿವಮೊಗ್ಗಕ್ಕೆ ಬಂದ ಮೊದಲ ವಿಮಾನ, ಏನೇನಾಯ್ತು, ಏನಿದರ ವಿಶೇಷ?

Shivamogga airport 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಧ್ಯ ಕರ್ನಾಟಕಕ್ಕೆ ಸಂಪರ್ಕ ಸೇತುವೆಯಾಗಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಂಗಳವಾರ ವಿಮಾನ ಲ್ಯಾಂಡ್ ಆಗಿದ್ದು, ಜನರ ಬಹುದಿನಗಳ ಕನಸು ನನಸಾಯಿತು.

VIDEO REPORT

 

ಸೋಗಾನೆ(Sogane)ಯಲ್ಲಿ ವಿಮಾನ ನಿಲ್ದಾಣಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿರುವ ವಿಮಾನ ನಿಲ್ದಾಣಕ್ಕೆ ಮೊಟ್ಟಮೊದಲ ವಿಮಾನವು ಲ್ಯಾಂಡ್ ಆಗಿದ್ದು, ಜನರು ಭಾರೀ ಖುಷಿಯಿಂದ ಈ ದೃಶ್ಯವನ್ನು ಕಣ್ತುಂಬಿಕೊಂಡರು.
ಮಂಗಳವಾರ ಮಧ್ಯಾಹ್ನ 2.30 ಗಂಟೆಯ ಹೊತ್ತಿಗೆಪ್ರಾಯೋಗಿಕವಾಗಿ ವಾಯು ಸೇನೆಯ ಬೋಯಿಂಗ್ 737-7ಎಚ್‍ಐ (oeing 737-7HI) ಮಾದರಿ ವಿಮಾನವು ಇಳಿದಿದ್ದು, ದೆಹಲಿಯಿಂದ ಹೊರಟಿದ್ದ ವಿಮಾನವು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ.
ವಾಯುಸೇನೆಯ ವಿಮಾನಕ್ಕೆ ವಾಟರ್ ಸೆಲ್ಯೂಟ್
ಮಧ್ಯಾಹ್ನ 2.30ರ ಸುಮಾರಿಗೆ ವಿಮಾನ ನಿಲ್ದಾಣದ ರನ್ ವೇನಲ್ಲಿ ಲ್ಯಾಂಡ್ ಆದ ವಿಮಾನಕ್ಕೆ ವಿಶೇಷವಾಗಿ ಸ್ವಾಗತಿಸಲಾಯಿತು. ರನ್ ವೇಯ ಎರಡೂ ಕಡೆಗಳಲ್ಲಿ ಅಗ್ನಿಶಾಮಕ ದಳದ ವಾಹನಗಳಿಂದ (ಫೈಯರ್ ಫೈಟಿಂಗ್ ವೆಹಿಕಲ್) ನೀರು ಹಾರಿಸುವ ಮೂಲಕ “ವಾಟರ್ ಸೆಲ್ಯೂಟ್’ ಸಲ್ಲಿಸಲಾಯಿತು. ವಿಶೇಷವೆಂದರೆ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

airport 2
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ವಿಮಾನ

ಶಿವಮೊಗ್ಗಕ್ಕೆ ಬಂದಿದ್ದ ವಿಮಾನ ಅಂತಿಂಥದ್ದಲ್ಲ!
ಪರೀಕ್ಷಾರ್ಥವಾಗಿ ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇನಲ್ಲಿ ಲ್ಯಾಂಡ್ ಮಾಡಲಾದ ವಿಮಾನವು ಭಾರಿ ವಿಶೇಷವಾದದ್ದು. ವಾಯು ಸೇನೆಯಿಂದ ನಿರ್ವಹಿಸಲ್ಪಡುವ ಈ ವಿಮಾನಕ್ಕೆ “ಇಂಡಿಯಾ 1” ಎಂಬ ಹೆಸರಿದೆ. ವಿಶೇಷವೆಂದರೆ, ಇದರಲ್ಲಿ ಹೈಟೆಕ್ ಸೌಲಭ್ಯಗಳಿದ್ದು, ವಿವಿಐಪಿಗಳಷ್ಟೇ ಇದನ್ನು ಬಳಸುತ್ತಾರೆ.
ರಾಷ್ಟ್ರಪತಿ, ಪ್ರಧಾನಮಂತ್ರಿ ಅವರು ವಿದೇಶಗಳಿಗೆ ತೆರಳಬೇಕಾದರೆ ಈ ವಿಮಾನವನ್ನು ಬಳಸಲಾಗುತ್ತದೆ. ಚಾಲನೆಯನ್ನೂ ಸಹ ಅತ್ಯಂತ ನಿಪುಣರೇ ಮಾಡುತ್ತಾರೆ.

error: Content is protected !!