Cinema | ಯುವರತ್ನದಲ್ಲಿ ಸೈಡ್ ರೋಲ್ ಮಾಡಿದ್ದ ಅಪ್ಪಟ ಮಲೆನಾಡು ಪ್ರತಿಭೆ, ಇನ್ನೂ 4 ಚಿತ್ರಗಳಿಗೆ ಆ್ಯಕ್ಷನ್ ಕಟ್

cocktail

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ‘ಯುವರತ್ನ’ ಕನ್ನಡ ಚಲನಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ಸೈಡ್ ರೋಲ್ ಮಾಡಿದ್ದ ಅಪ್ಪಟ ಮಲೆನಾಡಿನ ಪ್ರತಿಭೆ ಸೊರಬ ತಾಲೂಕಿನ ವೀರನ್‌ ಕೇಶವ್ ಅವರು ಇನ್ನೂ ನಾಲ್ಕು ಚಿತ್ರಗಳಲ್ಲಿ ನಟಿಸಲಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವೀರನ್ ಅವರ ತಂದೆ ಹಾಗೂ ನಿರ್ಮಾಪಕ ಡಾ.ಶಿವಪ್ಪ ಅವರು, ‘ಕಾಕ್ಟೈಲ್’ ಸಿನಿಮಾ ಯಶಸ್ಸು ಗಳಿಸಿದೆ. ಕನ್ನಡಿಗರೂ ಪ್ರತಿಭೆಯನ್ನು ಮೆಚ್ಚಿದ್ದಾರೆ. ಕಾಕ್ಟೈಲ್ ನಂತರ ಮುಂದಿನ ದಿನಗಳಲ್ಲಿ ನಾಲ್ಕು ಸಿನಿಮಾಗಳನ್ನು ನಿರ್ಮಿಸುವ ಆಸಕ್ತಿ ಇದೆ. ಕನ್ನಡಿಗರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕಾಕ್ಟೈಲ್ ಸಿನಿಮಾ ಯಶಸ್ವಿಯಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರದ ನಾಯಕ ನಟ ವೀರನ್‌ ಕೇಶವ್‌ಗೆ ಉತ್ತಮ ನಾಯಕ ನಟ ಪ್ರಶಸ್ತಿ ಕೂಡ ಸಿಕ್ಕಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ದೃಷ್ಟಿಯಿಂದ ಮತ್ತು ಸ್ಥಳೀಯ ಪ್ರತಿಭೆಗಳನ್ನು ಪರಿಚಯಿಸುವ ಹಿನ್ನೆಲೆಯಲ್ಲಿ ಸಾಲುಸಾಲಾಗಿ ಇತರೆ ನಿರ್ಮಾಪಕರ ಸಹಯೋಗದೊಂದಿಗೆ ನಾಲ್ಕು ಸಿನಿಮಾಗಳನ್ನು ನಿರ್ಮಿಸಲಿದ್ದೇನೆ ಎಂದರು.
ಯಾವ್ಯಾವ ಸಿನಿಮಾಗಳ ಚಿತ್ರೀಕರಣ?
ಈಗಾಗಲೇ ದಿ ಗೇಮರ್, ಡೂ ಆರ್ ಡೈ, ಲೋಕಲ್ ರೌಡಿ ಮತ್ತು ಹಟ್ಟಿ ಹಬ್ಬ ಎಂಬ ನಾಲ್ಕು ಚಲನಚಿತ್ರಗಳು ಬರುವ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಚಿತ್ರೀಕರಣಕ್ಕೆ ಸಿದ್ಧವಾಗಿವೆ ಎಂದರು.
ನಮ್ಮದು ಸೊರಬ ತಾಲೂಕಿನ ಹಿರೇಇಡಗೋಡು ಗ್ರಾಮ. ಈ ಗ್ರಾಮದಿಂದ ನಾಯಕ ನಟನಾಗಿ ಗಮನಸೆಳೆದ ನನ್ನ ವೀರನ್ ಕೇಶವ್ ಈಗಾಗಲೇ ಪ್ರೇಕ್ಷರಕ ಮನಸ್ಸನ್ನು ಗೆದ್ದಿದ್ದಾನೆ. ವಿಶಿಷ್ಟ ಅಭಿನಯದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದಾನೆ. ಇದಕ್ಕೆ ಕಾಕ್ಟೈಲ್ ಸಿನಿಮಾದ ಯಶಸ್ಸೇ ಕಾರಣ. ಈ ಸಿನಿಮಾ ಸಿನಿ ಬಜಾರ್ ಎಂಬ ಸಂಸ್ಥೆಯಿಂದ ಫೆ.17ರಂದು 177 ದೇಶಗಳಲ್ಲಿ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ನಿರ್ಮಾಣಕ್ಕೆ ದಿ. ಪುನೀತ್‌ರಾಜ್‌ಕುಮಾರ್ ಅವರ ಸಹಕಾರ ಮತ್ತು ಮಾರ್ಗದರ್ಶನ ಕೂಡ ಇತ್ತು ಎಂದರು.
ಬೆಂಗಳೂರಿನ ವಿಜಯಲಕ್ಷ್ಮಿ ಕಂಬೈನ್ಸ್ ಅಡಿಯಲ್ಲಿ ನಾವು ಹೀಗೆಯೇ ಚಿತ್ರಗಳನ್ನು ನಿರ್ಮಾಣ ಮಾಡುತ್ತೇವೆ. ಕನ್ನಡದ ಜನರು ನಮ್ಮನ್ನು ಪ್ರೋತ್ಸಾಹಿಸಬೇಕಾಗಿದೆ. ಹಟ್ಟಿಹಬ್ಬ ಸಿನಿಮಾ ಗ್ರಾಮೀಣ ಸೊಗಡಿನ ಅಡಿಯಲ್ಲಿ ಬರುತ್ತದೆ. ಶಿಕಾರಿಪುರ, ಶಿರಾಳಕೊಪ್ಪ ಮತ್ತು ಬಯಲುಸೀಮೆಯಲ್ಲಿ ಹೋರಿಹಬ್ಬದೊಂದಿಗೆ ವಿಶಿಷ್ಟವಾಗಿ ಆಚರಿಸುತ್ತಿರುವ ಹಟ್ಟಿಹಬ್ಬವನ್ನು ಈ ಚಿತ್ರದ ಮೂಲಕ ಬಿಂಬಿಸಲಾಗುವುದು ಎಂದರು.
ಕಾಕ್ಟೈಲ್ ಚಿತ್ರದ ನಾಯಕ ವೀರನ್‌ಕೇಶವ್, ರವಿರಾಜ್, ಮಂಜಪ್ಪ ಇದ್ದರು.

error: Content is protected !!