
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: “ನಾನು ಶಿವಮೊಗ್ಗದಲ್ಲಿ ಹಾಕಿರುವ ಪ್ಲೆಕ್ಸ್ ಕೆಲವರಿಗೆ ಶಿವಮೊಗ್ಗದ ಶಾಂತಿ ಅಪಹಾಸ್ಯದ, ಮನೋರಂಜನೆ ವಸ್ತುವಾಗುತ್ತಿರುವುದು ಬೇಸರ ತರಿಸಿದೆ” ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.
READ | 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ, ಗುಪ್ತವಾಗಿರಲಿದೆ ಫಲಿತಾಂಶ, ಏನೇನು ಕಂಡಿಷನ್ಸ್?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಕೆಲವರು ನನ್ನನ್ನು ‘ನಿತ್ಯ ಸುಮಂಗಲಿ’ಗೆ ಹೋಲಿಸಿದ್ದಾರೆ. ಅವರ ಹೇಳಿಕೆಗೆ ಕನಿಕರ ವ್ಯಕ್ತಪಡಿಸುತ್ತೇನೆ. ಜನ ಸಾಮಾನ್ಯರ ಬದುಕಿಗಾಗಿ ನಾನೋರ್ವ ಜನಪ್ರತಿನಿಧಿಯಾಗಿ ನಿತ್ಯ ಸುಮಂಗಲಿಯಾಗಲು ಸಿದ್ದನಿದ್ದೇನೆ ಎಂದರು.
ಟೀಕಿಸುವವರಿಗೆ ನನ್ನ ಹಿನ್ನೆಲೆ ಗೊತ್ತಿಲ್ಲ
“ನನ್ನನ್ನು ಟೀಕಿಸುವವರಿಗೆ ನನ್ನ ಹಿನ್ನೆಲೆ ಗೊತ್ತಿಲ್ಲ. ವಿದ್ಯಾರ್ಥಿ ಜೀವನದಲ್ಲೇ ಹೋರಾಟ ಮಾಡಿ, ಜೈಲಿಗೆ ಹೋಗಿದ್ದೇನೆ. ವಿದ್ಯಾರ್ಥಿ ದೆಸೆಯಲ್ಲೇ ಜೈಲುವಾಸ ಅನುಭವಿಸಿದ ಏಕೈಕ ರಾಜಕಾರಣಿ ನಾನು. ನಾನು ಸುಮಂಗಲಿಯಂತೆ ಕಂಡು ಬಂದರೆ ವಿಷಾದವಿಲ್ಲ, ಹೆಮ್ಮೆಯಿದೆ. ನಾನೋಂದು ಸೀಟ್ ಕೇಳಿದರೇ, ಇಷ್ಟೋಂದು ಕೆಳಮಟ್ಟದ ಕಮೆಂಟ್ ಗಳೇ?” ಎಂದು ಬೇಸರ ವ್ಯಕ್ತಪಡಿಸಿದರು.