Ayushmathi clinic | ಶಿವಮೊಗ್ಗದಲ್ಲಿ ಎಲ್ಲೆಲ್ಲಿವೆ ಆಯುಷ್ಮತಿ‌ ಕ್ಲಿನಿಕ್, ಏನಿದರ ಪ್ರಯೋಜನ, ಯಾವ ದಿನ ಚಿಕಿತ್ಸೆ ಲಭ್ಯ?

Ayushmathi clinic

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ನಾಲ್ಕು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(PHC)ಗಳಾದ ತುಂಗಾನಗರ, ಸೀಗೆಹಟ್ಟಿ, ಬೊಮ್ಮನಕಟ್ಟೆ ಮತ್ತು ಭದ್ರಾವತಿ ತಾಲ್ಲೂಕಿನ ಅಶ್ವಥನಗರಗಳಲ್ಲಿ ಮಹಿಳೆಯರ ಆಯುಷ್ಮತಿ ಕ್ಲಿನಿಕ್ ಆರಂಭಿಸಲಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ತಜ್ಞ ವೈದ್ಯರಿಂದ ಪ್ರತಿ ದಿನ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಹೇಳಿದರು.

READ | ಶಿವಮೊಗ್ಗ ಜಿಪಂ ಸಿಇಓ ವರ್ಗಾವಣೆ ಮಾಡಿ ಸರ್ಕಾರ ಆದೇಶ, ಯಾರು ಹೊಸ ಸಿಇಓ?

ತುಂಗಾನಗರದಲ್ಲಿ‌ ಇತ್ತೀಚೆಗೆ ಆಯುಷ್ಮತಿ ಕ್ಲಿನಿಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗಾಗಿ ರೂಪುಗೊಂಡ ಈ ಕ್ಲಿನಿಕ್‍ನಲ್ಲಿ ಉಚಿತವಾಗಿ ತಪಾಸಣೆ, ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ ವಿತರಣೆ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫರಲ್ ಸೇವೆಗಳು ಲಭ್ಯವಿದೆ. ಆಯುಷ್ಮತಿ ಕ್ಲಿನಿಕ್‍ಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಜನಸಂದಣಿ ಸಹ ಕಡಿಮೆ ಆಗಲಿದೆ‌. ರಾಜ್ಯದಲ್ಲಿ ಒಟ್ಟು 95 ಆಯಷ್ಮತಿ ಕ್ಲಿನಿಕ್‍ಗಳಿವೆ. ಎಂದರು.
ಯಾವ್ಯಾವ ದಿನ ಚಿಕಿತ್ಸೆ ಲಭ್ಯ?
ಆಯುಷ್ಮತಿ ಕ್ಲಿನಿಕ್‍ನಲ್ಲಿ ಪ್ರತಿ ಸೋಮವಾರ ಫಿಜಿಷಿಯನ್ , ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ ಶಸ್ತ್ರಚಿಕಿತ್ಸಾ ತಜ್ಞರು, ಗುರುವಾರ ಮಕ್ಕಳ ತಜ್ಞರು, ಶುಕ್ರವಾರ ಸ್ತ್ರೀರೋಗ ತಜ್ಞರು ಮತ್ತು ಶನಿವಾರ ಇತರೆ ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ, ಮಾನಸಿಕರೋಗ ತಜ್ಞರು ಸೇವೆ ನೀಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಎಂಎಲ್.ಸಿ‌‌ ಡಿ.ಎಸ್.ಅರುಣ್, ಆರ್‍ಸಿಎಚ್‍ಓ ಡಾ. ನಾಗರಾಜ್ ನಾಯ್ಕ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಗುಡುದಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಡಾ.ಹರ್ಷವರ್ಧನ್, ಡಾ.ಭೀಮಪ್ಪ, ಇತರೆ ತಜ್ಞ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

MCC | ಏನಿದು ನೀತಿಸಂಹಿತೆ, ಏನೆಲ್ಲ ಮಾಡುವಂತಿಲ್ಲ, ಯಾವುದಕ್ಕೆ ವಿನಾಯಿತಿ ಇರಲಿದೆ?

error: Content is protected !!