Public meeting | ಸೊರಬದಲ್ಲಿ ಟ್ರಾಫಿಕ್ ತೊಂದರೆ ತಡೆಗೆ ಪೊಲೀಸ್ ಮಾಸ್ಟರ್ ಪ್ಲ್ಯಾನ್, ಎಸ್ಪಿ ನೀಡಿದ 8 ಸೂಚನೆಗಳಿವು

SP Mithun Kumar 1

 

 

ಸುದ್ದಿ ಕಣಜ.ಕಾಂ ಸೊರಬ
SORAB: ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯ ಸೊರಬ ಟೌನ್ ರಂಗನಾಥ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಸೊರಬ ಮತ್ತು ಆನವಟ್ಟಿ ಪೊಲೀಸ್ ಠಾಣೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು‌ ಸಾರ್ವಜನಿಕರ ಅಹವಾಲುಗಳನ್ನು ಆಲೊಸಿದರು.

READ | ಶಿವಮೊಗ್ಗದ ಇಬ್ಬರು ಗೂಂಡಾ‌ ಕಾಯ್ದೆ ಅಡಿ‌ ಒಂದು ವರ್ಷ ಅಂದರ್, ಯಾವ ಜೈಲಿಗೆ‌ ಶಿಫ್ಟ್?

ಸಭೆಯಲ್ಲಿ‌ ಎಸ್.ಪಿ ಹೇಳಿದ್ದೇನು?

  1. ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಪಾಲನೆಯ ಕುರಿತಂತೆ ಮಾಹಿತಿಯನ್ನು ನೀಡಿ, ಶಾಲಾ ಕಾಲೇಜುಗಳು ಹತ್ತಿರ ಸಂಚಾರ ನಿಯಮ ಉಲ್ಲಂಘನೆ ತಡೆಯಲು, ಪೊಲೀಸ್ ಇಲಾಖೆಯಿಂದ ಹೆಚ್ಚಿನ ಆದ್ಯತೆಯನ್ನು ನೀಡಿ, ಅತಿವೇಗ ಮತ್ತು ಅಜಾಗರೂಕತೆಯ ವಾಹನ ಚಾಲನೆ ಮಾಡುವವರ ವಿರುದ್ಧ / ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನಗಳನ್ನು ಚಾಲನೆ ಮಾಡುವುದು. ದ್ವಿ ಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
  2. ಶಾಲಾ ಕಾಲೇಜುಗಳು ಪ್ರಾರಂಭ ವಾಗುವ ಮತ್ತು ಮುಕ್ತಾಯವಾಗುವ ಸಮಯದಲ್ಲಿ ಶಾಲಾ ಕಾಲೇಜುಗಳ ಹತ್ತಿರ ERSS -112 ವಾಹನ ಮತ್ತು ಪೊಲೀಸ್ ಗಸ್ತು ನೇಮಿಸಲಾಗುವುದು.
  3. ಸೊರಬ ಟೌನ್ ಬೆಳೆಯುತ್ತಿದ್ದು ಸಂಚಾರ ಮಾಹಿತಿ ಸೂಚಕ ಫಲಕಗಳು (Traffic Sign Board) ಮತ್ತು ಪ್ರಮುಖ ವೃತ್ತಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವ ಕುರಿತು ಪಟ್ಟಣ ಪಂಚಾಯಿತಿಯ ಸಮನ್ವಯದೊಂದಿಗೆ ಕ್ರಮ ಕೈಗೊಳ್ಳಲಾಗುವುದು.
  4. ಅಪರಾಧ ನಡೆಯುವುದನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚುವಲ್ಲಿ ಸಿ.ಸಿ ಕ್ಯಾಮೆರಾಗಳು ಪ್ರಮುಖ ಪಾತ್ರವಹಿಸುತ್ತವೆ, ಆದ್ದರಿಂದ Public Safety Act ಅಡಿಯಲ್ಲಿ ಸಾರ್ವಜನಿಕರು ತಮ್ಮ ಅಂಗಡಿ ಮತ್ತು ಮನೆಗಳಿಗೆ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಇದರಿಂದಾಗಿ ಯಾವುದೇ ಘಟನೆಗಳು ನಡೆದಾಗ, ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಕಾರಿಯಾಗುತ್ತದೆ.
  5. ಸೊರಬ ಬಸ್ ನಿಲ್ದಾಣದಿಂದ ರಂಗನಾಥ ಸ್ವಾಮಿ ದೇವಾಲಯದ ವರೆಗಿನ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಕುರಿತಂತೆ ಪಟ್ಟಣ ಪಂಚಾಯಿತಿಗೆ ವರದಿ ಸಲ್ಲಿಸಿ ಆದೇಶವಾದ ನಂತರ ಕ್ರಮ ಕೈಗೊಳ್ಳಲಾಗುವುದು.
  6. ತನಿಖೆಯಲ್ಲಿರುವ ಪ್ರಕರಣಗಳನ್ನು ವಿಳಂಬವಿಲ್ಲದೆ, ಕಾಲ ಮಿತಿಯ ಒಳಗೆ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗುತ್ತಿದೆ.
  7. ಸಾರ್ವಜನಿಕರು ತಮ್ಮ ಸಮಸ್ಯೆ ಮತ್ತು ಸಹಾಯಕ್ಕಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪಿಎಸ್ಐ, ಪಿಐ ಅವರನ್ನು ಭೇಟಿ ಮಾಡುವುದು, ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿರುತ್ತದೆ.
  8. ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ 112 ಸಹಾಯವಾಣಿ/ ಕಂಟ್ರೋಲ್ ರೂಮ್ ಗೆ ಸಂಪರ್ಕಿಸಿ ಸಹಾಯ ಪಡೆಯಲು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಶಿಕಾರಿಪುರ‌ ಡಿವೈಎಸ್ಪಿ ಶಿವಾನಂದ ಮದರಕಂಡಿ,‌ ಸೊರಬ‌ ವೃತ್ತದ ಪಿಐ ಭ್ಯಾಗ್ಯವತಿ, ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್, ಶಿವಪ್ರಸಾದ್, ವಿಠಲ್ ಅಗಸಿ ಇದ್ದರು.

ಶಿವಮೊಗ್ಗದಲ್ಲಿ ಕ್ರೈಂ ತಡೆಗೆ ಪೊಲೀಸ್ ಮಾಸ್ಟರ್ ಪ್ಲ್ಯಾನ್ ಸಿದ್ಧ, ಇಲ್ಲಿವೆ ಟಾಪ್ 11 ಅಂಶ

error: Content is protected !!