Bhadra dam | ಭದ್ರಾ ಡ್ಯಾಂನಿಂದ ನೀರು ಬಿಡುಗಡೆ, ಯಾವಾಗಿಂದ, ಎಷ್ಟು ಟಿಎಂಸಿ‌ ಹರಿವು?

Bhadra Dam

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ತುಂಗಾ-ಭದ್ರಾ ನದಿಗೆ 1.00 ಟಿಎಂಸಿ ನೀರನ್ನು ಹರಿಸಲು ಆದೇಶಿಲಾಗಿದೆ.

READ | ಶಿವಮೊಗ್ಗದಲ್ಲಿ ಮೂರು ದಿನ ನಿಷೇಧಾಜ್ಞೆ, ಯಾವಾಗಿಂದ ಅನ್ವಯ? ಕಾರಣವೇನು? ಇಲ್ಲಿವೆ 9 ಕಂಡಿಷನ್ಸ್

ಪ್ರಾದೇಶಿಕ ಆಯುಕ್ತರ ಅದೇಶದನ್ವಯ ಏ.27 ರ ಸಂಜೆ 6 ರಿಂದ ಮೇ 9 ರ ಬೆಳಗ್ಗೆ 6 ರವರೆಗೆ ಪ್ರತಿ ದಿನ 1000 ಕ್ಯೂಸೆಕ್ಸ್ ನಂತೆ ಒಟ್ಟು 11,574 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುವುದು.
ಈ ಅವಧಿಯಲ್ಲಿ ನದಿ ಪಾತ್ರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು, ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಇತ್ಯಾದಿಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಕರ್ನಾಟಕ ನೀರಾವರಿ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

Police raid on Jail | ಶಿವಮೊಗ್ಗ ಕೇಂದ್ರ ಕಾರಾಗೃಹ ಮೇಲೆ ಪೊಲೀಸರ ದಿಢೀರ್ ದಾಳಿ, ಕಾರಣವೇನು?

error: Content is protected !!