Shimoga Rain | ಶಿವಮೊಗ್ಗದಲ್ಲಿ ಬುಡಮೇಲಾಗಿ ಬಿದ್ದ ಮರಗಳು, ಮೆಸ್ಕಾಂ ಸಿಬ್ಬಂದಿ ಹೈರಾಣ, ಎಲ್ಲಿ ಏನಾಗಿದೆ?

Rain Tree fall

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗುಡುಗು, ಮಿಂಚು ಸಹಿತ ಬಿರುಗಾಳಿಯಿಂದಾಗಿ ನಗರದ ಹಲವೆಡೆ ಮರಗಳು ಬುಡಮೇಲಾಗಿ ಬಿದ್ದಿವೆ. ವಿದ್ಯುತ್ ಕಂಬಗಳ ಮೇಲೆ ತೆಂಗಿನ ಮರಗಳು ಬಿದ್ದಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಸಿಬ್ಬಂದಿ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

READ | ಶಿವಮೊಗ್ಗ- ಬೆಂಗಳೂರು KSRTC ಎಸಿ ಇ-ಬಸ್ ಕಾರ್ಯಾರಂಭ, ಎಷ್ಟಿದೆ ದರ? ಬಸ್ ವಿಶೇಷಗಳೇನು?

ಎಲ್ಲೆಲ್ಲಿ ಏನೇನಾಗಿದೆ?

  • ದೈವಜ್ಞ ಕಲ್ಯಾಣ ಮಂದಿರ ಹಿಂಭಾಗದಲ್ಲಿ ತೆಂಗಿನ ಮರವು ಬುಡಮೇಲಾಗಿ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
  • ಸೋಮಿನಕೊಪ್ಪದ ಭೋವಿ ಕಾಲೋನಿಯಲ್ಲಿ ಮನೆಯ ಶೀಟ್ ಹಾರಿ ಹೋಗಿದ್ದು, ಮನೆಯಲ್ಲಿದ್ದ ವಿವಿಧ ವಸ್ತುಗಳಿಗೆ ಹಾನಿಯಾಗಿದೆ.
  • ಮ್ಯಾಕ್ಸ್ ಆಸ್ಪತ್ರೆ ಸಮೀಪ ತೆಂಗಿನ ಮರ ಬಿದ್ದಿದ್ದುದ, ಎರಡು ಕಾರುಗಳು ಜಖಂಗೊಂಡಿವೆ ಎಂದು ಮಾಹಿತಿ ಲಭ್ಯವಾಗಿದೆ. ಈ ಘಟನೆಯಿಂದ ಮ್ಯಾಕ್ಸ್ ಆಸ್ಪತ್ರೆ ಹಾಗೂ ದುರ್ಗಿಗುಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು
  • ಬೊಮ್ಮನಕಟ್ಟೆಯಲ್ಲಿ ಸಿಡಿಲು ಬಡಿದು ಲಕ್ಷ್ಮೀಬಾಯಿ ಎಂಬುವವರು ಮೃತಪಟ್ಟಿದ್ದಾರೆ. ವಿನೋಬನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಜಿಲ್ಲೆಯ ಹಲವೆಡೆ ಗುಡುಗು, ಮಿಂಚು, ಮಳೆ
ಶಿವಮೊಗ್ಗ ಜಿಲ್ಲೆಯ (shimoga rain) ಹಲವೆಡೆ ಮಳೆಗಿಂತ ಗುಡುಗು, ಮಿಂಚಿನ ಆರ್ಭಟವೇ ಅಧಿಕವಾಗಿದೆ. ಅಲ್ಲಲ್ಲಿ ಮಳೆಯಾಗುತ್ತಿದ್ದು, ಬಿರುಗಾಳಿಯಿಂದಾಗಿ ಮರದ ಕೊಂಬೆಗಳು ಮುರಿದು ರಸ್ತೆಯ ಮೇಲೆ ಬಿದ್ದಿವೆ. ಬಡಾವಣೆಗಳಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆಯೂ ಕೊಂಬೆಗಳು ಬಿದ್ದು ಅಲ್ಪಸ್ವಲ್ಪ ಹಾನಿ ಉಂಟಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

error: Content is protected !!