RTO | ಶಿವಮೊಗ್ಗದಲ್ಲಿ ಆರ್.ಟಿ.ಓ ಭರಪೂರ ದಂಡ ವಸೂಲು, 120 ವಾಹನ ಮುಟ್ಟುಗೋಲು

currency

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿ (shimoga regional transport office) ಚದರ ವತಿಯಿಂದ ಚುನಾವಣಾ ಪ್ರಯುಕ್ತ ಮಾರ್ಚ್ 29 ರಿಂದ ಮೇ 9 ರವರೆಗೆ ವಿಶೇಷ ತಪಾಸಣಾ ಕಾರ್ಯಕ್ರಮ ಕೈಗೊಂಡಿದ್ದು 120 ವಾಹನಗಳನ್ನು ಮುಟ್ಟುಗೋಲು ಹಾಕಿ, ಒಟ್ಟು ₹30,03,136 ಗಳನ್ನು ವಸೂಲು ಮಾಡಲಾಗಿದೆ.

READ | ಸಕ್ರೆಬೈಲು‌‌ ಆನೆ ಬಿಡಾರ ಪ್ರವೇಶಕ್ಕೆ 2 ದಿನ ನಿರ್ಬಂಧ, ಕಾರಣವೇನು?

ಯಾವ್ಯಾವ ರೀತಿಯ ಕೇಸ್ ದಾಖಲು?
ಒಟ್ಟು 1,504 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ನಿಯಮಬಾಹಿರವಾಗಿ ಮಾರ್ಪಾಡುಗೊಳಿಸಲಾದ ವಾಹನಗಳ ಸಂಖ್ಯೆ 4, ಪರವಾನಗಿ ಉಲ್ಲಂಘನೆ ಮಾಡಿದ ಪ್ರಕರಣ 1, ಸರಕು- ಸಾಗಣೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವ ಪ್ರಕರಣ 7, ದೋಷಪೂರಿತ ನೋಂದಣಿ ಫಲಕಗಳುಳ್ಳ ವಾಹನ 5, ಪರವಾನಗಿರಹಿತ/ ಅರ್ಹತಾ ಪತ್ರ ನವೀಕರಿಸದ/ತೆರಿಗೆ ಪಾವತಿಸದ/ ಅಧಿಕ ಭಾರ ಕೊಂಡೊಯ್ಯುವ ಪ್ರಕರಣ 262 ಸೇರಿದಂತೆ ಒಟ್ಟು 279 ಪ್ರಕರಣಗಳನ್ನು ದಾಖಲಿಸಲಾಗಿದೆ. ₹13,51,102 ತೆರಿಗೆ ಹಾಗೂ ₹16,52,034 ದಂಡದ ಮೊತ್ತ ಸೇರಿ ಒಟ್ಟು ₹30,03,136 ಗಳನ್ನು ವಸೂಲು ಮಾಡಲಾಗಿದೆ. ಒಟ್ಟು 120 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RTO Rules | ವಾಹನ ಚಾಲನೆ ವೇಳೆ ಎಲ್ಲ ದಾಖಲೆಗಳಿರುವುದು‌ ಕಡ್ಡಾಯ, ಆರ್.ಟಿ.ಓ ಎಚ್ಚರಿಕೆ

error: Content is protected !!