ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಸಕ್ರೆಬೈಲು ಆನೆಬಿಡಾರ ಪ್ರವೇಶಕ್ಕೆ ಎರಡು ದಿನ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ ಪಟಗಾರ ತಿಳಿಸಿದ್ದಾರೆ.
READ | ತೀರ್ಥಹಳ್ಳಿಯಲ್ಲಿ ಕಳೆದ ವರ್ಷದಷ್ಟೇ ಓಟಿಂಗ್, ಈ ಎಲೆಕ್ಷನ್ ಬಗ್ಗೆ ತಿಳಿದುಕೊಳ್ಳಬೇಕಾದ ನಾಲ್ಕು ವಿಚಾರಗಳಿವು
ಯಾವಾಗ ನಿರ್ಬಂಧ?
ಮೇ 16 ಮತ್ತು 17ರಂದು ಸಕ್ರೆಬೈಲು ಆನೆ ಬಿಡಾರದ ಆವರಣದಲ್ಲಿ ಆನೆ ಕವಾಡಿಗಳ ನೇರ ನೇಮಕಾತಿ ಕುರಿತಂತೆ ಮೂಲ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಪ್ರಕ್ರಿಯೆಗಳು ನಡೆಯಲಿರುವುದರಿಂದ ಸದರಿ ದಿನಾಂಕಗಳಂದು ಪ್ರವಾಸಿಗರಿಗೆ ಆನೆ ಬಿಡಾರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.