Pump set | ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಕೂಡಲೇ ಅರ್ಜಿ‌ ಸಲ್ಲಿಸಿ, ಯಾರಿಗೆಲ್ಲ ಅವಕಾಶ?

Water

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ತಾಲೂಕು ಗ್ರಾಮೀಣ ಉಪ ವಿಭಾಗ ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ರೈತರು ಪಂಪ್ ಸೆಟ್’ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

READ | ಕೆಎಸ್ಆರ್. ಟಿಸಿ ಬಸ್- ಬೈಕ್ ನಡುವೆ ಭೀಕರ ಅಪಘಾತ, ವ್ಯಕ್ತಿ ಸ್ಥಳದಲ್ಲೇ ಸಾವು

ಯಾರಿಗೆಲ್ಲ ಅರ್ಜಿ ಸಲ್ಲಿಸಲು ಅವಕಾಶ?
ಅಬ್ಬಲಗೆರೆ, ಪಿಳ್ಳಂಗೆರೆ, ಹೊಳಲೂರು, ಗಾಜನೂರು ಮತ್ತು ಸಂತೇಕಡೂರು ಶಾಖಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರುವ ರೈತರು ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ ಯೋಜನೆಯಡಿ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಮೆಸ್ಕಾ ಕಚೇರಿಯಿಂದ ನಿಗದಿತ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜುಲೈ 7ರೊಳಗಾಗಿ ಸಲ್ಲಿಸುವಂತೆ ಗ್ರಾ.ಉ.ವಿ. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!