ಸುದ್ದಿ ಕಣಜ.ಕಾಂ | DISTRICT | YOUTH ICON
ಶಿವಮೊಗ್ಗ: ಹೆತ್ತ ತಂದೆ ತಾಯಿಗಳ ಆರೈಕೆಯಿಂದಲೇ ಹಿಂದೇಟು ಹಾಕಿತ್ತಿರುವ ಸಮಾಜದಲ್ಲಿ ಇಲ್ಲೊಂದು ಯುವಕ ತಂಡ ಮಾನಸಿಕ ಕಾಯಿಲೆಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಬದುಕಿಗೆ ಮಾರ್ಗ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಈ ತಂಡ ಮಾನವೀಯತೆ ಮೆರೆದಿದೆ.
https://www.suddikanaja.com/2021/01/19/job-fair-in-shivamogga-2/
ಎರಡು ವಾರ ಆರೈಕೆ
15 ದಿನಗಳ ಕಾಲ ಮಾನಸಿಕ ಖಿನ್ನತೆಗೆ ಒಳಗಾದ ಅನಾಮಧೇಯ ವ್ಯಕ್ತಿಗೆ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿ, ಅವರನ್ನು ಸ್ವಚ್ಛ ಮಾಡಿ, ಹೊಸ ಬಟ್ಟೆಯನ್ನು ತೊಡಿಸಿ ಸಾಮಾಜಿಕ ಜವಾಬ್ದಾರಿ ತೋರಿದ್ದಾರೆ.
ಶಿವಮೊಗ್ಗ ತಾಲೂಕು ತುಪ್ಪುರು ಕಾರ್ತಿಕ್ ಗೌಡ ಮತ್ತು ಸ್ನೇಹಿತ ತಂಡದ ಈ ಕಾರ್ಯ ಮಾಡಿದೆ.
ಶಿವಮೊಗ್ಗ ಸಮೀಪ ಕಂಡುಬಂದ ಮಾನಸಿಕ ಕಾಯಿಲೆಗೆ ಒಳಗಾದ ಅನಾಮಧೇಯ ವ್ಯಕ್ತಿಯ ಹೆಸರು ವಿಳಾಸ ಕಲೆ ಹಾಕಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಈ ಯುವಕರ ತಂಡವು ವ್ಯಕ್ತಿಯನ್ನು ತಾವರೆಕೊಪ್ಪದ ನಿರಾಶ್ರಿತ ತಾಣಕ್ಕೆ ಸೇರಿಸಿದ್ದಾರೆ. ಆತನಿಗೊಂದು ಸೂರು ಕಲ್ಪಿಸಿದ್ದಾರೆ.
https://www.suddikanaja.com/2021/05/11/wrestler-srinivas-died-due-to-corona/
ಕೊರೊನಾ ಕಾಲದಲ್ಲೂ ಸೇವೆ
ಕಾರ್ತಿಕ್ ಗೌಡ ಹಾಗೂ ಮತ್ತು ಸ್ನೇಹಿತರ ತಂಡ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಕಾರೊನಾ ವಾರಿಯರ್ಸ್ ಗಳಿಗೆ ಊಟ ಉಪಹಾರ ಪೂರೈಸಿದ್ದಾರೆ. ಅಪಘಾತದಿಂದ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ ಪರಿತಪಿಸುತ್ತಿದ್ದ ಊರಿನ ಯುವಕನ ಚಿಕಿತ್ಸೆಗೆ ಹಣ ಸಂಗ್ರಹಣೆ,
ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.
– ವರದಿ | ಅಜಿತ್ ಗೌಡ ಬಡೇನಕೊಪ್ಪ
https://www.suddikanaja.com/2021/08/28/most-wanted-accused-arrested-in-shiralakoppa/