Heart attack | ಚಲಿಸುತ್ತಿದ್ದ‌ ಬಸ್ಸಿನಲ್ಲಿ ಪ್ರಯಾಣಿಕನಿಗೆ ಹಾರ್ಟ್ ಅಟ್ಯಾಕ್, ಮುಂದೇನಾಯ್ತು?

Breaking news

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಚಲಿಸುತ್ತಿದ್ದ ಬಸ್ಸಿನಲ್ಲಿ ತೆರಳುತ್ತಿದ್ದ ಪ್ರಯಾಣಿಕನಿಗೆ ಹೃದಯಾಘಾತವಾಗಿದ್ದು, ತಕ್ಷಣ ಆತನನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ (JC Hospital) ದಾಖಲಿಸಿದ ಘಟನೆ ನಡೆದಿದೆ.

READ | ಶಿವಮೊಗ್ಗದಲ್ಲಿ ಹೈಟೆಕ್ ಆಗಿ ಗಾಂಜಾ ಬೆಳೆಯುತ್ತಿದ್ದ ಭಾವಿ ಡಾಕ್ಟರ್, ಅವನ ಗ್ರಾಹಕರ‌್ಯಾರು? ಸಿಕ್ಕಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ತೀರ್ಥಹಳ್ಳಿ ಸಮೀಪ ಖಾಸಗಿ ಬಸ್ಸಿನಲ್ಲಿ (Private Bus) ಘಟನೆ ನಡೆದಿದ್ದು, ತಕ್ಷಣ ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದೊಯ್ದ ಬಸ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.
ಆಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ಶಿಫ್ಟ್
ಹೃದಯಾಘಾತಕ್ಕೀಡಾದವರನ್ನು ಕೇರಳ ಮೂಲದವರು ಬಾಬು ಎನ್ನಲಾಗಿದೆ. ಅವರನ್ನು ಶಿವಮೊಗ್ಗಕ್ಕೆ ಕರೆತರುವಲ್ಲಿ ಆಂಬುಲೆನ್ಸ್‌ ಚಾಲಕ ರಂಜಿತ್‌, ರಹಮತ್‌ ಮತ್ತು ಪವನ್‌ ಸಹಕರಿಸಿದ್ದಾರೆ. ಬಾಬು ಈಗ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

error: Content is protected !!