Tree burnt | 20 ಅಡಿ‌ ಮರದೊಳಗೆ ಬೆಂಕಿ! ಆರಿಸಿದ ವೈಖರಿ‌ ನೋಡಿದ್ರೆ ಅಚ್ಚರಿಯಾಗೋದು ಗ್ಯಾರಂಟಿ

fire

 

 

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ
SHIRALAKOPPA: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣ ಬಳಿಯ ಬೆಲವಂತನಕೊಪ್ಪ ಗ್ರಾಮದಲ್ಲಿ 20 ಅಡಿ ಮರದ ಪೊಳ್ಳು ಭಾಗಕ್ಕೆ ಬೆಂಕಿ ತಾಕಿದ್ದು, ಅದನ್ನು ನಂದಿಸಿದ ಪರಿಯೇ ಅಚ್ಚರಿ ಮೂಡಿಸಿದೆ.

READ | 15/07/2023 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?

ಹಿರೇಕೇರೂರು ರಸ್ತೆಯ ಬದಿ ಬೃಹತ್ ತಬಸಿ ಮರದೊಳಗಿನ ಪೊಳ್ಳು ಭಾಗಕ್ಕೆ ಬೆಂಕಿ‌ ತಗುಲಿದ್ದು, ಮರದ ಮೇಲೆ ಹತ್ತಿ ಬೆಂಕಿಯನ್ನು ನಂದಿಸಲಾಗಿದೆ.
ಮನೆಯೊಂದರ ಮುಂಭಾಗದ ಮರಕ್ಕೆ ಬೆಂಕಿ ತಗುಲಿದ್ದು ಮಧ್ಯಾಹ್ನ ಜನರು ನೋಡಿದ್ದೇ ಗಾಬರಿಯಾಗಿದ್ದಾರೆ. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದೆ.
ಜನರೇ ಸೇರಿ ಅಗ್ನಿ ನಂದಿಸಿದರು

Video Report

ಬೆಂಕಿಯನ್ನು ನಂದಿಸಲು ಮೋಟರ್ ಬಳಸಿ ನೀರು ಬಿಡಲಾಯಿತು. ವಿಶೇಷವೆಂದರೆ ಜೀವದ ಹಂಗು ತೊರೆದು ಗೋಪಾಲಪ್ಪ ಎಂಬುವವರು ಮರ ಹತ್ತಿ ಬೆಂಕಿಯನ್ನು ನಂದಿಸಲು ಸಹಕರಿಸಿದರು. ಉಪ ವಲಯ ಅರಣ್ಯಾಧಿಕಾರಿ ಅಕ್ಷಯ್, ವಾಹನ ಚಾಲಕ ಜೀವನ್, ಲೈನ್ ಮಾನ್ ಅಬ್ದುಲ್ಲಾ, ಶಿವು, ಬಸ್ ಏಜೆಂಟ್ ಸತೀಶ್, ಶಿಕ್ಷಕ ಪುನೀತ್, ಅನುರಾಗ್, ಜಿ.ಎನ್.ಅರುಣ್ ಕುಮಾರ್, ಫಕ್ಕಿರಪ್ಪ ಬೆಂಕಿಯನ್ನು ಹತೋಟಿಗೆ ತಂದರು.

ಬೆಂಕಿ ಕೆನ್ನಾಲಿಗೆ ಬೆಚ್ಚಿಬಿದ್ದ ಬೆಂಗಳೂರು, 30 ಅಡಿ ಆಕಾಶಕ್ಕೆ ಚಿಮ್ಮಿದ ಬ್ಯಾರೆಲ್!

error: Content is protected !!