Milk crisis | ಬೆಲೆ ಏರಿಕೆಯ‌ ಮುನ್ನಾ ದಿನ ಶಿವಮೊಗ್ಗದಲ್ಲಿ ಹಾಲಿನ ತಾತ್ಕಾಲಿಕ ಬಿಕ್ಕಟ್ಟು, ಕಾರಣವೇನು ?

milk

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರದಲ್ಲಿ ಇಂದು ಹಾಲಿನ ತಾತ್ಕಾಲಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಸಂಜೆ 8ರ ಹೊತ್ತಿಗೆ ನಂದಿನಿ ಪಾರ್ಲರ್ ಗಳಲ್ಲಿ ಹಾಲಿನ ಪ್ಯಾಕೆಟ್’ಗಳು‌ ಖಾಲಿಯಾಗಿವೆ.
ಆಗಸ್ಟ್ 1ರಿಂದ ಹಾಲು ಮತ್ತು ಮೊಸರಿನ ದರವನ್ನು ಪರಿಷ್ಕರಿಸಲು ಶಿಮೂಲ್ ತೀರ್ಮಾನ ಕೈಗೊಂಡಿದೆ. ಹೀಗಾಗಿ, ಸಾರ್ವಜನಿಕರು ಮತ್ತು ಹೋಟೆಲ್ ನವರು ಮುಂಚಿತವಾಗಿಯೇ ಹಾಲು ಖರೀದಿಸಿ‌‌ ದಾಸ್ತಾನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

READ | ಸ್ವಾತಂತ್ರ್ಯ ದಿನಕ್ಕೆ ಡಿಎಆರ್ ಮೈದಾನದಲ್ಲಿ ಜರ್ಮನ್ ಟೆಂಟ್, ಜಿಲ್ಲೆಯಲ್ಲಿ ಈ ಸಲದ ವಿಶೇಷಗಳೇನು?

ಸಾಮಾನ್ಯವಾಗಿ ನಿತ್ಯ ರಾತ್ರಿ 10 ಗಂಟೆಯಾದರೂ ನಂದಿನಿ ಪಾರ್ಲರ್ ಗಳಲ್ಲಿ ಹಾಲು ಲಭ್ಯವಿರುತ್ತಿತ್ತು. ಆದರೆ, ಮಂಗಳವಾರದಿಂದ ಹಾಲು ಮತ್ತು ಮೊಸರಿನ ದರದಲ್ಲಿ ಏರಿಕೆ ಆಗಲಿದೆ. ಇದನ್ನು ಅಧಿಕೃತವಾಗಿ ಶಿಮೂಲ್ ಘೋಷಣೆ ಮಾಡಿದ್ದೇ ಜನರು ಹಾಲನ್ನು ದಾಸ್ತಾನು ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ಪ್ಯಾಕೆಟ್ ಖರೀದಿಸುವವರು ಮೂರ್ನಾಲ್ಕು ಪ್ಯಾಕೆಟ್’ಗಳನ್ನು ಖರೀದಿಸುವ ದೃಶ್ಯ ಕಂಡುಬಂದಿದೆ.

Agumbe ghat | ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ,‌ ಬದಲಿ ಮಾರ್ಗದ ಮಾಹಿತಿ ಇಲ್ಲಿದೆ

error: Content is protected !!