Police Firing | ಶಿವಮೊಗ್ಗದಲ್ಲಿ ಮತ್ತೆ ಪೊಲೀಸರ ಪಿಸ್ತೂಲ್ ಸದ್ದು, ಆರೋಪಿಯ ಕಾಲಿಗೆ ಬಿತ್ತು ಗುಂಡು

gun Firing

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದರೋಡೆ, ಕೊಲೆ ಯತ್ನ, ಎನ್.ಡಿ.ಪಿಎಸ್ ಕಾಯ್ದೆ (NDPS Act) ಸೇರಿದಂತೆ ಹಲವು ಗಂಭೀರ ಪ್ರಕರಣಗಳ ಆರೋಪಿ ತಲೆಮರೆಸಿಕೊಂಡಿದ್ದು ಆತನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದಾಗ ಕಾಲಿಗೆ ಗುಂಡು (Police Firing) ಹೊಡೆಯಲಾಗಿದೆ.

READ | ಗುತ್ತಿಗೆ ಸಂಸ್ಥೆಗಳಿಂದ ಭಾರೀ ಪ್ರಮಾಣದ ಹಣ ವಸೂಲಿ, ಡಿಸಿ ನೀಡಿದ ಖಡಕ್ ವಾರ್ನಿಂಗ್ ಏನು?

SP Mithun Kumar 1

 

 

 

 

ಆಯನೂರು ಸಮೀಪದ ದೊಡ್ಡದಾನಂದಿ ಗ್ರಾಮದಲ್ಲಿ ಸೈಫು ಕಾಲಿಗೆ ಗುಂಡು ಹೊಡೆಯಲಾಗಿದೆ. ಕೊಲೆ ಯತ್ನ ಪ್ರಕರಣ ಸಂಬಂಧ ಸೈಫು ಎಂಬಾತನನ್ನು ಬಂಧಿಸಲು ತೆರಳಿದಾಗ ಸಿಬ್ಬಂದಿ ನಾಗರಾಜ್ ಮೇಲೆ ದಾಳಿಗೆ ಮುಂದಾದಾಗ ಜಯನಗರ ಪಿಎಸ್.ಐ ನವೀನ್ ಅವರು ಆರೋಪಿಯ ಕಾಳಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಸೈಫುಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಯಾರು ಈ ಸೈಫು
ರೌಡಿಶೀಟರ್ ಸೈಫು ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ 16, ತುಂಗಾನಗರ, ಜಯನಗರದಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ. ಈತ ಗೂಂಡಾ ಕಾಯ್ದೆ ಅಡಿ ಜೈಲಿನಲ್ಲಿರುವ ಮಾರ್ಕೆಟ್ ಫೌಜನ್’ನ ಸಹಚರನಾಗಿದ್ದಾನೆ.

Petrol Price | ರಾಜ್ಯದಲ್ಲೇ ಪೆಟ್ರೋಲ್ ಬೆಲೆ ದಾವಣಗೆರೆಯಲ್ಲಿ ತುಟ್ಟಿ, ನಂತರದ ಸ್ಥಾನದಲ್ಲಿವೆ ಬಳ್ಳಾರಿ, ಶಿವಮೊಗ್ಗ, ಇಂದಿನ ಬೆಲೆ ಎಷ್ಟು?

 

error: Content is protected !!