Shimoga Airport | ಶಿವಮೊಗ್ಗಕ್ಕೆ ಆಗಮಿಸಿದ ಮೊದಲ ವಿಮಾನ, ಹೇಗಿತ್ತು ಫಸ್ಟ್ ಟ್ರಿಪ್, ಏನೇನಾಯ್ತು?

shimoga airport 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಲವು ವರ್ಷಗಳ ಕನಸು ಗುರುವಾರದಂದು ನೆರವೇರಿತು. ಬಿ.ಎಸ್.ಯಡಿಯೂರಪ್ಪ (B.S.Yediyurappa) ಡಿಸಿಎಂ ಆಗಿದ್ದಾಗ ಚಿಗುರೊಡೆದ ವಿಮಾನ ನಿಲ್ದಾಣದ ಕನಸು ನನಸುಗೊಂಡಿದ್ದಲ್ಲದೇ ಮಲೆನಾಡಿನ ಆಗಸದಲ್ಲಿ ಲೋಹದ ಹಕ್ಕಿಗಳ ಶಬ್ದವೂ ಕೇಳಲಾರಂಭಿಸಿದೆ.‌ ಮೊದಲ ಇಂಡಿಗೋ ವಿಮಾನವು ಶಿವಮೊಗ್ಗ ವಿಮಾನ ನಿಲ್ದಾಣ(shimoga airport)ಕ್ಕೆ ಆಗಮಿಸಿದ್ದು, ಜನರ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರ ಮೊಗದಲ್ಲೂ ಸಂತೋಷದ ಕಾಣುತ್ತಿತ್ತು. ವಿಮಾನ ಯಾನದ ಮೊದಲ ಟ್ರಿಪ್ ಉತಮವಾಗಿದ್ದು, ಶಿವಮೊಗ್ಗದ ನೆಲದಲ್ಲಿ ಸೇಫ್ ಲ್ಯಾಂಡ್ ಆಗಿದ್ದೇ ಖುಷಿ ಮುಗಿಲುಮುಟ್ಟಿತು.

VIDEO REPORT 

ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಯ ಎಟಿಆರ್ (ATR Flight) ವಿಮಾನವು ಸಾಫ್ಟ್ ಲ್ಯಾಂಡಿಂಗ್ ಕಂಡಿತು.

shimoga airport program
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ.

READ | ಶಿವಮೊಗ್ಗ- ಬೆಂಗಳೂರು ವಿಮಾನಯಾನ ಸೇವೆ ಆರಂಭ, ಮೊದಲು ಲ್ಯಾಂಡ್ ಆಗುವ ವಿಮಾನಕ್ಕೆ ವಿಶಿಷ್ಟ ಸ್ವಾಗತ

ವಿಮಾನಕ್ಕೆ ವಾಟರ್ ಸೆಲ್ಯೂಟ್
ರನ್ ವೇ ಮೇಲೆ ವಿಮಾನವು ಬೆಳಗ್ಗೆ‌ 11 ಗಂಟೆಗೆ ಸಾಫ್ಟ್ ಲ್ಯಾಂಡಿಂಗ್ (Flight sof landing) ಆಗಿದ್ದೇ ಸಂಪ್ರದಾಯದಂತೆ ಅತ್ಯಾಧುನಿಕ‌ ಅಗ್ನಿಶಾಮಕ ಯಂತ್ರಗಳ ಮೂಲಕ ವಾಟರ್ ಸೆಲ್ಯೂಟ್ (Water salute) ಮಾಡಲಾಯಿತು.
ಮೊದಲ ದಿನ ವಿಮಾನ ಹೌಸ್ ಫುಲ್
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ ಮೊದಲ 78 ಆಸನಗಳನ್ನು ಹೊಂದಿರುವ ವಿಮಾನದಲ್ಲಿ ಬಹುತೇಕ‌ ಎಲ್ಲ ಸೀಟ್ ಗಳು ಭರ್ತಿಯಾಗಿದ್ದವು. ವಾಪಸ್ ಬೆಂಗಳೂರಿಗೆ ತೆರಳುವ ವಿಮಾನದಲ್ಲೂ ಆಸನಗಳು ಬಹುತೇಕ‌ ಭರ್ತಿಯಾಗಿವೆ‌.
ಬೆಂಗಳೂರಿನಿಂದ ಗಣ್ಯರ ಆಗಮನ

Indigo bus airport
ಇಂಡಿಗೋ ಬಸ್ ನಲ್ಲಿ ಗಣ್ಯರು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda international airport)ದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕರಾದ ಕೆ.ಎಸ್.ಈಶ್ವರಪ್ಪ, ಹರತಾಳು ಹಾಲಪ್ಪ, ಶಾಸಕ ಚನ್ನಿ, ಡಿ.ಎಸ್.ಅರುಣ್ ಇತರರು ಆಗಮಿಸಿದರು.
ಶಿವಮೊಗ್ಗಕ್ಕೆ ಹೊರಟ ಮೊದಲ ಇಂಡಿಗೋ (Indigo) ವಿಮಾನದ ಮುಂದೆ ವಿಮಾನ ಯಾನದ ಸಿಬ್ಬಂದಿ, ಪ್ರಯಾಣಿಕರು ಮತ್ತು ಗಣ್ಯರು ಫೋಟೊಗೆ ಪೋಸ್ ಕೊಟ್ಟರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಧ್ಯುಕ್ತ ಕಾರ್ಯಕ್ರಮವೊಂದು ಆಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿಲ್ದಾಣದೊಳಗೆ ಮತ್ತು ಹೊರಗೆ ಬಿಗಿ ಭದ್ರತೆ ಮಾಡಲಾಗಿತ್ತು. ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಮೀಸಲು ಪೊಲೀಸ್ ಪಡೆ ಸೇರಿದಂತೆ ಸ್ಥಳೀಯ ಪೊಲೀಸರು ಗಸ್ತಿನಲ್ಲಿದ್ದರು.
ವಿಮಾನ ನಿಲ್ದಾಣದ ಹಿಂದಿದೆ ರೈತರ ತ್ಯಾಗ
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, “ವಿಮಾನ ನಿಲ್ದಾಣ ಸಿದ್ಧವಾಗಬೇಕಾದರೆ ಇದರ ಹಿಂದೆ ರೈತರ ತ್ಯಾಗವಿದೆ. ಅವರು ಭೂಮಿ ನೀಡಿದ್ದರಿಂದ ಇಷ್ಟು ದೊಡ್ಡ ವಿಮಾನ ನಿಲ್ದಾಣ ಮಾಡಲು ಸಾಧ್ಯವಾಯಿತು ಎಂದರು‌.

error: Content is protected !!