ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಕುಂಸಿ ಗ್ರಾಮದ ಸಮೀಪ ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ । ಶಿವಮೊಗ್ಗದಲ್ಲಿ ಬಾಲಿವುಡ್ ಬ್ಯೂಟಿ ‘ಜಾಕ್ವೆಲಿನ್’, ಭೇಟಿಗೆ ಕಾರಣ ಇಲ್ಲಿದೆ…
ಮೃತಪಟ್ಟವನನ್ನು ಚೋರಡಿ ಗ್ರಾಮದ ನಿವಾಸಿ ಅವಿನಾಶ್ (31) ಎಂದು ಗುರುತಿಸಲಾಗಿದೆ. ಹೊಳೆಹೊನ್ನೂರಿನ ನಾಗೇಶ್ ಎಂಬಾತ ಬೈಕ್ ಹಿಂಬದಿ ಕುಳಿತಿದ್ದ, ಈತನಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.
ಹೀಗೆ ನಡೀತು ಅಪಘಾತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಸಿಯಿಂದ ಮನೆಗೆ ಹೋಗುವಾಗ ಘಟನೆ ಸಂಭವಿಸಿದೆ. ಬೈಕ್ ಸವಾರರು ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿದ್ದಾರೆ. ಆಗ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಜಖಂ ಆಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.