Area Domination | ಪೊಲೀಸರ ದಿಢೀರ್ ದಾಳಿ, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ, ಹಲವರ ವಿರುದ್ಧ ಕೇಸ್

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ, ಸಾಗರ ಮತ್ತು ಭದ್ರಾವತಿಯಲ್ಲಿ ಏರಿಯಾ ಡಾಮಿನೇಷನ್ (Area Domination) ಮುಂದಿವರಿದಿದ್ದು, ಶುಕ್ರವಾರ ರಾತ್ರಿ ನಡೆದ ದಾಳಿಯಲ್ಲಿ ಒಟ್ಟು 118 ಲಘು ಸೇರಿದಂತೆ ವಿವಿಧ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಶಿವಮೊಗ್ಗ-ಎ, ಶಿವಮೊಗ್ಗ-ಬಿ, ಸಾಗರ ಮತ್ತು ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಠಾಣೆಗಳ ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು ಮತ್ತು ಸಿಬ್ಬಂದಿಯ ತಂಡವು ಆಯಾ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಲಾಯಿತು‌. Public Nuisance ಮಾಡಿದವರ ವಿರುದ್ದ ಒಟ್ಟು 118 ಲಘು ಪ್ರಕರಣಗಳನ್ನು ದಾಖಲಿಸಲಾಯಿತು. 4 COTPA ಹಾಗೂ 15 IMV ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ.

 

error: Content is protected !!