BJP Protest | ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯ 3 ಪ್ರಮುಖ ಆರೋಪಗಳು, ರಸ್ತೆಗಳಿದ ಪಕ್ಷದ ಪ್ರಮುಖರು

BJP

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿಜೆಪಿ ರೈತ ಮೋರ್ಚಾ(BJP Raita Morcha)ದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯನ್ನು ಮಾಡಿದ ಪಕ್ಷದ ಪ್ರಮುಖರು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ‌ ಮಳೆ‌ ಸುರಿಸಿದರು. ಆಡಳಿತದಲ್ಲಾಗುತ್ತಿರುವ ಲೋಪಗಳನ್ನು ಎತ್ತಿಹಿಡಿದರು.

READ | ಗಣೇಶ ಚತುರ್ಥಿ ಹಿನ್ನೆಲೆ ವಿಶೇಷ ರೈಲುಗಳ ಸೌಲಭ್ಯ, ಇಲ್ಲಿದೆ ವೇಳಾಪಟ್ಟಿ

one click many news logo

ಶಿವಮೊಗ್ಗದಲ್ಲಿ ಆಶ್ರಯ ಯೋಜನೆಯಡಿ ಎರಡು ತಿಂಗಳಲ್ಲಿ ಮನೆ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಮೂರು ಸಾವಿರ ಜನರನ್ನೂ ಕರೆದುಕೊಂಡು ಜಿಲ್ಲೆಗೆ ಬರುವ ಸಚಿವರಿಗೆ ಘೇರಾವ್ ಹಾಕಲಾಗುವುದು. ಜೈಲ್ ಭರೊ ಕಾರ್ಯಕ್ರಮ ನಡೆಸಲಾಗುವುದು. ಡಿಕೆಶಿ, ಸಿದ್ದರಾಮಯ್ಯ ಬಂದರೆ ಮುತ್ತಿಗೆ ಹಾಕುತ್ತೇವೆ.
ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ

ಸರ್ಕಾರಕ್ಕೆ ನೂರು ದಿನಗಳಲ್ಲಿ‌ ಏನು ಸಾಧನೆ ಮಾಡಿದೆ ಎನ್ನುವುದನ್ನು ನೋಡಿದ್ದೇವೆ.‌ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಬರುತ್ತದೆ ಎಂಬುದು ಮತ್ತೆ ಮತ್ತೆ ನಿಜವಾಗುತ್ತಿದೆ.
ಬಿ.ವೈ ರಾಘವೇಂದ್ರ, ಸಂಸದ

ಬಿಜೆಪಿ ಮುಖಂಡರ ಪ್ರಮುಖ ಆರೋಪಗಳೇನು?

  1. ರಾಜ್ಯದಲ್ಲಿ ಮಳೆ‌ ಇಲ್ಲ. ಜಲಾಶಯಗಳು ಬತ್ತುವ ಸ್ಥಿತಿಯಲ್ಲಿವೆ. ಬರಗಾಲ‌ ಎದುರಾಗಿದೆ. ಆದರೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬರ ಘೋಷಣೆ ಇದುವರೆಗೆ ಮಾಡಿಲ್ಲ. ಕೂಡಲೇ ಬರ ಘೋಷಿಸಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ತಕ್ಷಣ ಪರಿಹಾರ ನೀಡಬೇಕು. ಸಿಎಂ, ಡಿಸಿಎಂ ರೈತರಲ್ಲಿಗೆ ಹೋಗಿ ಅವರ ಅಹವಾಲು ಆಲಿಸಬೇಕು. ಬರ ಅಧ್ಯಯನ ನಡೆಸಬೇಕು.
  2. ಕಾಂಗ್ರೆಸ್ ಘೋಷಿಸಿದ ಐದೂ ಗ್ಯಾರಂಟಿಗಳು ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಗ್ಯಾರಂಟಿಗಳ‌‌ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ. ವಿದ್ಯುತ್ ಅಭಾವ ಎದುರಾಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗುತ್ತಿಲ್ಲ. ಗೃಹಲಕ್ಷ್ಮಿ‌ ಬಗ್ಗೆ ಸರ್ಕಾರದಲ್ಲೇ ಗೊಂದಲಗಳಿವೆ. ರಾಜ್ಯದಲ್ಲಿ 6.5 ಕೋಟಿ ಜನ ಇದ್ದಾರೆ. ನ್ಯಾಯವಾಗಿ 1.5 ಕೋಟಿ ನಿಜವಾಗಿ ಕೊಡಬೇಕು.
  3. ರೈತರಿಗೆ ನೀರು, ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿತ್ತು. ಒಂದು ಕಡೆ ಗ್ಯಾರಂಟಿ ನೀಡುತ್ತಾ, ಇನ್ನೊಂದು ಕಡೆ ತೆರಿಗೆ ಹಾಕುತ್ತಿದ್ದಾರೆ. 5 ಲಕ್ಷಕ್ಕಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಪುಟ ಸಚಿವರೊಬ್ಬರು ಹಗುರವಾದ ಹೇಳಿಕೆ ನೀಡುತ್ತಾರೆ. ಬಿಜೆಪಿ ಪಕ್ಷದಿಂದಲೆ ಮೂರು ಕೋಟಿ ಜೋಡಿಸಿ ಕೊಡುತ್ತೇವೆ. ಅದನ್ನು ಬಳಸಿಕೊಳ್ಳಿ. ಕಣ್ಞು, ಕಿವಿ, ಬಾಯಿ ಇಲ್ಲದ ಸರ್ಕಾರಕ್ಕೆ ಎಚ್ಚರಿಸುವ ಕೆಲಸವನ್ನು ಈ ಪ್ರತಿಭಟನೆಯಿಂದ ಮಾಡುತ್ತಿದ್ದೇವೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ರೈತರಿಗೆ ಕೇಂದ್ರದಿಂದ ಮಾಡಬೇಕಾದ ಎಲ್ಲ ಸಹಾಯ ಮಾಡಲಾಗುವುದು.

ಪ್ರತಿಭಟನೆಯಲ್ಲಿ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಮಾಜಿ ಶಾಸಕ ಅಶೋಕ್ ನಾಯ್ಕ್ ,ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Dacoit | ಲಿಫ್ಟ್ ನೀಡುವುದಾಗಿ ಕರೆದೊಯ್ದು ದರೋಡೆ, 24 ಗಂಟೆಯಲ್ಲೇ ಆರೋಪಿಗಳು ಅಂದರ್

error: Content is protected !!