ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಹೊಳಲೂರಿನ (Holaluru) ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ(Canara Bank Rural Self Employment Training Institute (CB RSETI)ಯಲ್ಲಿ ಉಚಿತ ತರಬೇತಿ(Free Training)ಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
READ | ನಾಳೆ ಶಿವಮೊಗ್ಗದ ಅರ್ಧ ಶಿವಮೊಗ್ಗಕ್ಕೆ ಕರೆಂಟ್ ಕಟ್, ಎಲ್ಲೆಲ್ಲಿ ವ್ಯತ್ಯಯ, ಕಾರಣವೇನು?
ಹೊಂದಿರಬೇಕಾದ ಅರ್ಹತೆಗಳೇನು?
ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು. 8ನೇ ತರಗತಿ ಉತ್ತೀರ್ಣರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ (BPL Card) ಹೊಂದಿದ್ದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ- ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಯಾವ್ಯಾವ ತರಬೇತಿಗಳು?
- ಡೆಸ್ಕ್ ಟಾಪ್ ಪಬ್ಲಿಕೇಶನ್ (45 ದಿನಗಳು)- 5/07/2023
- ಎಂಬ್ರಾಯಿಡರಿ ಮತ್ತು ಫ್ಯಾಬ್ರಿಕ್ ಪೈಟಿಂಗ್(30 ದಿನಗಳು)-10/07/2023
- ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ(10 ದಿನಗಳು)- 18/07/2023
- ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ (30 ದಿನಗಳು)- 24/07/2023
- ಕುರಿ ಸಾಕಾಣಿಕೆ(10 ದಿನಗಳು)- 17/08/2023
- ಕಂಪ್ಯೂಟರೈಜಡ್ ಅಕೌಂಟಿಂಗ್ (30 ದಿನಗಳು)- 28/08/2023
- ಇನ್ಸ್ಟಾಲೇಷನ ಮತ್ತು ಸರ್ವಿಸಿಂಗ್ ಸಿಸಿಟಿವಿ (13 ದಿನಗಳು)- 11/09/2023
ಇಲ್ಲಿಗೆ ಸಂಪರ್ಕಿಸಿ
ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ: ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-577 216 (ಶಿವಮೊಗ್ಗ ತಾಲ್ಲೂಕು) ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9481955721, 9743429595, 8660062683, 8722384541, 9449371579, 8105378735
ಸಂಪರ್ಕಿಸಿ.
Jobs in shimoga | ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿಷಯವಾರು ಮಾಹಿತಿ ಇಲ್ಲಿದೆ