Parking | ನಗರದ ಈ ಪ್ರದೇಶದಲ್ಲಿ ಪಾರ್ಕಿಂಗ್ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ, ಕಾರಣಗಳೇನು?

No parking

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಶಿವಮೂರ್ತಿ ವೃತ್ತದಿಂದ ಡಿಸಿ ಕಾಂಪೌಂಡ್’ವರೆಗಿನ ರಸ್ತೆಯಲ್ಲಿ ಪಾರ್ಕಿಂಗ್ ವಿಚಾರವಾಗಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಆದೇಶಿಸಿದ್ದಾರೆ.

Shivamogga DC Dr R Selvamani
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ

READ | ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ, 241 ರೌಡಿಗಳ ಮನೆಯಲ್ಲಿ‌ ಚೆಕಿಂಗ್ 

ಶಿವಮೂರ್ತಿ ವೃತ್ತ ಬಳಿ ಮೆಟ್ರೋ ಆಸ್ಪತ್ರೆ ಇದ್ದು ವಾಹನ ದಟ್ಟಣೆ ಹೆಚ್ಚಾಗಿ ಶಿವಮೂರ್ತಿ ಸರ್ಕಲ್‍ನಿಂದ ಹಾದು ಹೋಗುವ ಜಯನಗರ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.‌ ಅಲ್ಲದೇ ರಸ್ತೆಯಲ್ಲಿ ಸರ್ವೋದಯ ಶಾಲೆ ಇದ್ದು, ವಿದ್ಯಾರ್ಥಿಗಳ ಓಡಾಟ ಸಹ ಹೆಚ್ಚಾಗಿರುತ್ತದೆ ಮತ್ತು ನೆಹರೂ ಸ್ಟೇಡಿಯಂಗೆ ಹೋಗುವ ದ್ವಾರವೂ ಸಹ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದುದ್ದರಿಂದ ರಸ್ತೆಯಲ್ಲಿನ ವಾಹನ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಜಯನಗರ ಮುಖ್ಯ ರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಡಿ.ಸಿ.ಕಾಂಪೌಂಡ್‍ವರೆಗೆ ಸುಗಮ ಸಂಚಾರ ದೃಷ್ಠಿಯಿಂದ ಅಧಿಸೂಚನೆ ಹೊರಡಿಸಲಾಗಿದೆ.
ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್)
ಜಯನಗರ ಮುಖ್ಯ ರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಡಿ.ಸಿ. ಕಾಂಪೌಂಡ್‍ವರೆಗೆ ಎಡಭಾಗ ಹಾಗೂ ಜಯನಗರ ಮುಖ್ಯರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಜಯನಗರ 1ನೇ ಕ್ರಾಸ್ ಬಲಭಾಗ ಎಲ್ಲ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ.
ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್)
ಜಯನಗರ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯದಿಂದ ಡಿ.ಸಿ. ಕಾಂಪೌಂಡ್‍ವರೆಗೆ ಬಲಭಾಗ ವಾಹನಗಳ ನಿಲುಗಡೆ ಮಾಡಬಹುದಾಗಿದೆ.

error: Content is protected !!