Eid milad | ರಾಗಿಗುಡ್ಡದಲ್ಲಿ ಈದ್ ಮಿಲಾದ್ ಕಟೌಟ್ ವಿಚಾರವಾಗಿ ಗೊಂದಲ, ಸ್ಥಳಕ್ಕೆ ಎಸ್.ಪಿ ಭೇಟಿ

Breaking news1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರಾಗಿಗುಡ್ಡದಲ್ಲಿ ಹಾಕಿದ್ದ ಕಟೌಟ್ ವಿಚಾರವಾಗಿ ಕೆಲಹೊತ್ತು ಗೊಂದಲ ಸೃಷ್ಟಿಯಾಗಿತ್ತು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Mithun kumar SPಶಾಂತಿನಗರದಲ್ಲಿ ಅಳವಡಿಸಿದ್ದ ಕಟೌಟ್ ವಿಚಾರವಾಗಿ ಗೊಂದಲ ಸೃಷ್ಟಿಯಾಗಿತ್ತು. ಕಟೌಟ್ ಸ್ವಲ್ಪ ವಿವಾದಾತ್ಮಕವಾಗಿತ್ತು. ಹೀಗಾಗಿ ತಕ್ಷಣ ಕ್ರಮಕೈಗೊಂಡು ಮುನ್ನೆಚ್ಚರಿಕೆ ಹೆಜ್ಜೆಗಳನ್ನು ಇಡಲಾಗಿದೆ. ಸದ್ಯ ಯಾವುದೇ ಸಮಸ್ಯೆ ಇಲ್ಲ.
ಜಿ.ಕೆ.ಮಿಥುನ್ ಕುಮಾರ್, ಎಸ್.ಪಿ, ಶಿವಮೊಗ್ಗ

ರಸ್ತೆಯಲ್ಲೇ ನಡೀತು ಪ್ರತಿಭಟನೆ
ರಾಗಿಗುಡ್ಡ ಮೇನ್ ರೋಡ್ ನಲ್ಲೇ ಕಟೌಟ್ ಹಾಕಲಾಗಿತ್ತು. ಈ‌ ಕುರಿತು ಗೊಂದಲ ಉಂಟಾಗಿತ್ತು. ಜನರು ಶಿವಮೊಗ್ಗ ಹೊನ್ನಾಳಿ ರಸ್ತೆಗಿಳಿದು ಪ್ರತಿಭಟಿಸಿದರು.

READ |  ಈದ್ ಮಿಲಾದ್ ಮೆರವಣಿಗೆಗೆ ಸಿದ್ಧವಾದ ಶಿವಮೊಗ್ಗ, ಎಲ್ಲೆಲ್ಲಿ ಏನೇನು ಅಲಂಕಾರ?

ಕೆಲವರಿಗೆ ಗೊತ್ತಿರಲಿಲ್ಲ
ಈ ರೀತಿಯ ವಿವಾದಾತ್ಮಕ ಕಟೌಟ್ ಹಾಕಬಾರದೆಂದು ಮಾಹಿತಿ ಇರಲಿಲ್ಲ. ಹೀಗಾಗಿ, ಅಳವಡಿಸಿದ್ದಾರೆ. ಅವರಿಗೂ ಮನವರಿಕೆ ಮಾಡಲಾಗಿದೆ. ಪ್ರಸ್ತುತ ಯಾವ ತೊಂದರೆಯೂ ಇಲ್ಲ. ಜನ ವದಂತಿಗಳಿಗೆ ಕಿವಿಗೊಡಬಾರದು ಎಂದು ಎಸ್.ಪಿ ತಿಳಿಸಿದ್ದಾರೆ.
ಮೆರವಣಿಗೆ ಹಿನ್ನೆಲೆ ಪೊಲೀಸ್ ಇಲಾಖೆ ಭದ್ರತೆ ಸಂಬಂಧ ಎಲ್ಲ ಪೂರ್ವ ತಯಾರಿ ಮಾಡಿಕೊಂಡಿದೆ. ಎರಡು ಆರ್‌ಎಎಫ್‌ ಕಂಪನಿ, ಐದು ಕೆಎಸ್ಆರ್‌ಪಿ ತುಕಡಿ, 12 ಡಿಎಆರ್ ತುಕಡಿ, ಒಟ್ಟು 2500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಂಚಾರ ಸಮಸ್ಯೆ ಉಂಡಾಗಬಾರದು ಎಂಬ ಕಾರಣಕ್ಕೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಸಂಚಾರ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ‌.

error: Content is protected !!