Ragigudda case | ರಾಗಿಗುಡ್ಡದಲ್ಲಿ ಪಿಐಗೆ ಧಮಕಿ ಹಾಕಿದ್ದ ಆರೋಪಿ ಅರೆಸ್ಟ್, ಸುಳ್ಳು ಸುದ್ದಿ ಹಬ್ಬಸಿದವನ ವಿರುದ್ಧ ಎಫ್.ಐಆರ್, ಪರಿಹಾರದ ಬಗ್ಗೆ ಮಧು ಹೇಳಿದ್ದೇನು?

Ragigudda

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವನ ವಿರುದ್ಧ ಎಫ್.ಐಆರ್ ಹಾಗೂ ಪಿಐಗೆ ಧಮಕಿ ಹಾಕಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

VIDEO REPORT

READ | ಶಿವಮೊಗ್ಗದಲ್ಲಿ ಕೊತ-ಕೊತವೂ ಇಲ್ಲ, ಧಗ-ಧಗವೂ ಇಲ್ಲ, ಎಸ್.ಪಿ ಮೆಸೇಜ್ ಭಾರೀ ವೈರಲ್

“ಮುಸ್ಲಿಂ ಯುವಕನನ್ನು ಪೊಲೀಸರು ಎನ್’ಕೌಂಟರ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಹರಿಬಿಟ್ಟಿದ್ದ. ಗಮನಕ್ಕೆ ಬಂದಿದ್ದೇ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಗಲಾಟೆ ನಡೆಯುವ ಸಂದರ್ಭದಲ್ಲಿ ತಡೆಯಲು ಮುಂದೆ ಬಂದ ಪಿಐಗೆ ಸ್ಥಳೀಯ ಯುವಕ ಕಲೀಮ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

GK Mithun kumar
ಜಿ.ಕೆ.ಮಿಥುನ್ ಕುಮಾರ್, ಶಿವಮೊಗ್ಗ ಎಸ್ಪಿ

ಕಾನೂನಿನಲ್ಲಿ ಅವಕಾಶವಿದ್ದರೆ ಪರಿಹಾರ

SHIMOGA: ರಾಗಿಗುಡ್ಡ ಗಲಾಟೆಯಲ್ಲಿ ಮನೆಗಳ ಕಿಟಕಿ ಗಾಜುಗಳು ಒಡೆದಿದ್ದು, ವಾಹನಗಳು ಜಖಂಗೊಂಡಿವೆ. ಅವರಿಗೆ ಕಾನೂನಿನಲ್ಲಿ ಅವಕಾಶವಿದ್ದರೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕೆಲವು ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಶಿವಮೊಗ್ಗ ಶಾಂತಿಯಿಂದ ಇರಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು.
ಮಧು ಬಂಗಾರಪ್ಪ, ಸಚಿವ

ಗಲಭೆಪೀಡಿತ ಪ್ರದೇಶವಾದ ರಾಗಿಗುಡ್ಡಕ್ಕೆ ಬೇಟಿ ನೀಡಿದ ಸಚಿವರು, ಪರಿಸ್ಥಿತಿಯನ್ನು ವೀಕ್ಷಿಸಿದರು. ಕಲ್ಲು ತೂರಾಟಕ್ಕೊಳಗಾದ ಮನೆಗಳಿಗೆ ಭೇಟಿ ನೀಡಿ, ಜನರು ಭೀತಿಗೆ ಒಳಗಾಗಬಾರದೆಂದು ಮನವಿ ಮಾಡಿದರು.
ಘಟನೆ ಸಂಬಂಧ 24 ಪ್ರಕರಣಗಳನ್ನು ದಾಖಲಿಸಿಕೊಂಡು  60 ಜನರನ್ನು ಬಂಧಿಸಲಾಗಿದೆ. ಘಟನೆ ಆದ ದಿನ ಮಡಿಕೇರಿನಲ್ಲಿದ್ದೆ. ಅಲ್ಲಿಯೇ ನಾನು ಅಧಿಕಾರಿಗಳಿಂದ  ಮಾಹಿತಿ ಪಡೆದುಕೊಂಡಿದ್ದೇನೆ. ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಅದ್ಧೂರಿಯಾಗಿ ನಡೆದಿದೆ. ಆದರೆ, ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದಿದೆ. ಈ ಘಟನೆ ನಡೆಯಬಾರದಿತ್ತು. ಘಟನೆ ನಡೆದಿರುವುದಕ್ಕೆ ನನಗೆ ವಿಷಾದವಿದೆ ಎಂದರು.

Madhu Bangarappa
ಮಧು ಬಂಗಾರಪ್ಪ

ಗಾಯಾಳುಗಳ ಆರೋಗ್ಯ ವಿಚಾರಣೆ
ಕಲ್ಲು ತೂರಾಟದಲ್ಲಿ ಗಾಯಗೊಂಡು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಜಿಲ್ಲಾ ಉಸ್ತುವಾರಿ  ಸಚಿವ ಮಧು ಬಂಗಾರಪ್ಪ ವಿಚಾರಿಸಿದರು.

error: Content is protected !!