Fata Fat news | ಪಿಎಚ್.ಸಿ, ಸಿಎಚ್.ಸಿಗಳಲ್ಲಿನ ಖಾಲಿ ಹುದ್ದೆಗಳ‌ ಭರ್ತಿಗೆ ನಡೆಯಲಿದೆ ನೇರ ಸಂದರ್ಶನ, ಮನೆ ಬಾಗಿಲಿಗೆ ಡಿಜಿಟಲ್‌ ಜೀವನ ಪತ್ರ

Fata Fat News

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಎಂಬಿಬಿಎಸ್ ಮತ್ತು ತಜ್ಞ ವೈದ್ಯರುಗಳನ್ನು ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಶಿಮೊಗ್ಗ ಹಾಗೂ ಉಪವಿಭಾಗೀಯ ಆಸ್ಪತ್ರೆ ಸಾಗರ ಇವರಲ್ಲಿ ನ.16 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆವರೆಗೆ ಹಾಜರಾಗಲು ಕೋರಿದೆ ಅದೇ ದಿನ ಮೂಲ ದಾಖಲಾತಿ ಹಾಗೂ ಒಂದು ಜೆರಾಕ್ಸ್ ಪ್ರತಿ ಫೋಟೋ ದೊಂದಿಗೆ ಪರಿಶೀಲನೆ ಹಾಜರಾಗುವುದು ಪರಿಶೀಲನೆಯ ನಂತರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದು‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.

READ | ಅತಿಸಾರ ಬೇಧಿಯಿಂದ ಪ್ರತಿವರ್ಷ ಐದು ಮಕ್ಕಳ ಸಾವು, ಪೋಷಕರಿಗೆ ತಜ್ಞ ವೈದ್ಯರು ನೀಡಿದ ಸಲಹೆಗಳೇನು?

ಮೆಸ್ಕಾಂ ಗ್ರಾಹಕರ ಸಂವಹನ ಸಭೆ

SHIMOGA: ಶಿವಮೊಗ್ಗ ನಗರ ಉಪ ವಿಭಾಗ-2 ವ್ಯಾಪ್ತಿಯಲ್ಲಿ ನ.18 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ನ್ಯೂಮಂಡ್ಲಿಯ ಮೆಸ್ಕಾಂ ನಗರ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಗ್ರಾಹಕರ ಸಂವಹನ ಸಭೆ ಕರೆಯಲಾಗಿದೆ.

ಡಿಜಿಟಲ್ ಜೀವನ ಪ್ರಮಾಣ ಪತ್ರ

SHIMOGA: ಭಾರತೀಯ ಅಂಚೆ ಇಲಾಖೆಯು ರಾಜ್ಯ ಸರ್ಕಾರದ ಖಜಾನೆಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಪಿಂಚಣಿದಾರರಿಗೆ/ ಕುಟುಂಬ ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು ಭಾರತೀಯ ಅಂಚೆ ಇಲಾಖೆಯು ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್’, ಪಿಂಚಣಿದಾರರ ಮನೆಬಾಗಿಲಿನಲ್ಲಿ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಸಲ್ಲಿಸುವ ವ್ಯವಸ್ಥೆಯನ್ನು ಮಾಡಿದೆ.
ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಕೆಲವೇ ನಿಮಿಷಗಳಲ್ಲಿ ಪೋಸ್ಟ್ ಮನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಓ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಪೋಸ್ಟ್ ಮನ್ ಮೂಲಕ ಕೇವಲ ₹70 (ಜಿಎಸ್‍ಟಿ ಸೇರಿದಂತೆ) ಶುಲ್ಕ ನೀಡಿ ಈ ಸೌಲಭ್ಯವನ್ನು ಪಡೆದು ತಮ್ಮ ಡಿಜಿಟಲ್ ಲೈಪ್ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಶಿವಮೊಗ್ಗ ಅಂಚೆ ಇಲಾಖಾ ಕಚೇರಿಯ ಸೂಪರಿಟೆಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!