Murder case | ಗುಡ್ಡೆಕಲ್ ಫ್ಲೈಓವರ್ ಬಳಿ ಮಲ್ಲೇಶ್ ಕೊಲೆ, ಆರೋಪಿಗಳ ಬಂಧನ, ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿಗಳು

Kote police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಧರ್ಮರಾಯನಕೇರಿ ನಿವಾಸಿ ಮಲ್ಲೇಶ್(35) ಕೊಲೆ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರ‌‌‌ ಕೈಗೆ ಏಳು ಜನ ಆರೋಪಿಗಳು ಸಿಕ್ಕಿದ್ದಾರೆ.

READ | ದೀಪಾವಳಿ ದಿನವೇ ನಡೀತು ಭೀಕರ ಕೊಲೆ, ಸ್ಥಳಕ್ಕೆ ಎಸ್.ಪಿ ದೌಡು

ತಿಗಳರಕೇರಿ ನಿವಾಸಿಗಳಾದ ಕಾರ್ತಿಕ್‌, ಕಿರಣ್‌, ಪ್ರಕಾಶ್‌, ಸುರೇಶ್‌, ವೇಣುಗೋಪಾಲ್‌, ಶ್ರೇಯಸ್‌, ಪ್ರಭು ಬಂಧಿತ ಆರೋಪಿಗಳು. ಮೃತ ಮಲ್ಲೇಶ್‌ ಮತ್ತು ಆರೋಪಿಗಳು ಸಂಬಂಧಿಕರಾಗಿದ್ದು, ಎರಡು ವರ್ಷಗಳ ಹಿಂದೆ ಮಲ್ಲೇಶ್ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರ ರಿವೆಂಜ್ ತೀರಿಸಿಕೊಳ್ಳುವ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲೇಶ್ ಬೈಕಿನಲ್ಲಿ ಹೋಗುವಾಗ ಹಲ್ಲೆ ಮಾಡಲಾಗಿದೆ. ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಪರಿಣಾಮ ಆತ ಮೃತಪಟ್ಟಿದ್ದಾನೆ. ಕೊಲೆ ನಡೆದ ಬೆನ್ನಲ್ಲೇ ಜನರು ಭೀತಿಗೆ ಒಳಗಾಗಿದ್ದರು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!