Mysuru Rangayana | ಮೈಸೂರು ರಂಗಾಯಣದ ನಾಟಕಗಳ ಪ್ರದರ್ಶನ, ಎಲ್ಲಿ, ಯಾವಾಗಿಂದ?

Shivamogga taluk

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ರಂಗಾಯಣ ಪ್ರಸಕ್ತ ಸಾಲಿನಲ್ಲಿ ಸಿದ್ಧಪಡಿಸಿರುವ ಎರಡು ಹೊಸ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಲು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣದ ಸಹಕಾರದೊಂದಿಗೆ ನ.18 ರಂದು ‘ಮುಟ್ಟಿಸಿಕೊಂಡವನು’ ಮತ್ತು ನ.19 ರಂದು ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನವನ್ನು ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ.

READ | ಪಾಪ ಹಿರಿಜೀವ ಯಡಿಯೂರಪ್ಪೆ ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ ವಯಸ್ಸಾಗಿತ್ತು, ಚುನಾವಣೆ ನಡೆಸಲು ಯೌವ್ವನ ಇದೆಯೇ?

‘ಮುಟ್ಟಿಸಿಕೊಂಡವನು’ ನಾಟಕ ಪಿ.ಲಂಕೇಶ್ ಕಥೆಯಾಧಾರಿತವಾಗಿದ್ದು, ರಂಗಾಯಣದ ಹಿರಿಯ ಕಲಾವಿದೆ ಕೆ.ಆರ್.ನಂದಿನಿ ನಿರ್ದೇಶಿಸಿದ್ದಾರೆ. ‘ಕಸಾಂದ್ರ ಮತ್ತು ಸತಿ’ ನಾಟಕ ಎಚ್.ಎಸ್.ಶಿವಪ್ರಕಾಶ್ ಅವರು ರಚಿಸಿದ್ದು, ಮೊದಲ ಬಾರಿಗೆ ಎರಡು ನಾಟಕಗಳನ್ನು ಸೇರಿಸಿ ಪ್ರದರ್ಶಿಸುತ್ತಿರುವ ಹೊಸ ರಂಗಪ್ರಯೋಗ ಇದಾಗಿದೆ. ಈ ನಾಟಕವನ್ನು ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳರು ನಿರ್ದೇಶಿಸಿದ್ದಾರೆ.
ಒಬ್ಬರಿಗೆ ಟಿಕೆಟ್ ದರ ₹100
ಟಿಕೆಟ್ ದರ ಒಂದು ನಾಟಕಕ್ಕೆ ಒಬ್ಬರಿಗೆ ₹100. ಟಿಕೆಟ್‍ಗಳನ್ನು ಮುಂಗಡವಾಗಿ ಖರೀದಿಸಲು ಅವಕಾಶವಿದ್ದು, ಟಿಕೆಟ್‍ಗಳಿಗಾಗಿ ರಂಗಾಯಣ, ಸುವರ್ಣ ಸಾಂಸ್ಕೃತಿಕ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ದೂರವಾಣಿ ಸಂಖ್ಯೆ: 08182-256353 ಯನ್ನು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕುವೆಂಪು ರಂಗಮಂದಿರ, ಶಿವಮೊಗ್ಗ ದೂ.ಸಂ: 08182-223354 ನ್ನು ಸಂಪರ್ಕಿಸಬಹುದು ಎಂದು ರಂಗಾಯಣದ ಆಡಳಿತಾಧಿಕಾರಿ ಡಾ.ಎ.ಸಿ.ಶೈಲಜಾ ತಿಳಿಸಿದ್ದಾರೆ.

error: Content is protected !!