Shimoga railway station | ರೈಲ್ವೆ ನಿಲ್ದಾಣ ಬಳಿ ಅನುಮಾನಾಸ್ಪದ ಬಾಕ್ಸ್, ಇಟ್ಟವರಾರು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

railway station bomb

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರೈಲ್ವೆ ನಿಲ್ದಾಣ ಹತ್ತಿರ ಅನುಮಾನಾಸ್ಪದವಾಗಿ ಬಾಕ್ಸ್ ಗಳನ್ನು ಇಟ್ಟಿದ್ದ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ‌ ಪಡೆದಿದ್ದು, ಅವರು ಕ್ರಿಮಿನಲ್ ಹಿನ್ನೆಲೆ ಹೊಂದಿದವರಾಗಿದ್ದಾರೆ ಎಂದು ಖುದ್ದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ನವೆಂಬರ್ 3ರಿಂದ‌ ಎರಡು ಬಾಕ್ಸ್ ಗಳು ರೈಲ್ವೆ ನಿಲ್ದಾಣ ಬಳಿ ಇಡಲಾಗಿತ್ತು. ಅದನ್ನ್ಯಾರೂ ಗಮನಿಸಿಯೇ ಇಲ್ಲ. ನಿನ್ನೆ ಬೆಳಗ್ಗೆ ಹೊತ್ತಿನಲ್ಲಿ ಸಾರ್ವಜನಿಕರು ಬಾಕ್ಸ್ ಗಳಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮದವರಿಗೆ ಎಸ್.ಪಿ ಮಾಹಿತಿ ನೀಡಿದರು.

Crime logo

READ | ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಪತ್ತೆಯಾದ ಬಾಕ್ಸ್ ಗಳಲ್ಲೇನಿತ್ತು?, ಎಸ್.ಪಿ ಹೇಳಿದ್ದೇನು?

ವಾಹನದಲ್ಲಿ‌ ಬಂದು ಅನ್ ಲೋಡ್
ವಾಹನದಲ್ಲಿ ಬಂದ ಇಬ್ಬರು ಬಾಕ್ಸ್ ಗಳನ್ನು ಅನ್ ಲೋಡ್ ಮಾಡಿದ್ದಾರೆ.‌ ಇದು ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ. ಅದರ ಜಾಡು ಹಿಡಿದು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಸ್ಫೋಟ ಮಾಡಿ ಬಾಕ್ಸ್‌ ಓಪನ್
ಬೆಳಗ್ಗೆ ಬಾಕ್ಸ್ ಬಗ್ಗೆ ಮಾಹಿತಿ ಲಭಿಸಿದ್ದೇ ಸ್ಥಳೀಯ ಪೊಲೀಸರು, ಶ್ವಾನದಳದ ಸಹಾಯದಿಂದ ಪರಿಶೀಲಿಸಿದ್ದಾರೆ. ಹೆಚ್ಚುವರಿ ಪರಿಶೀಲನೆಯ ಅವಶ್ಯಕತೆಗಾಗಿ ಬೆಂಗಳೂರಿನ ಬಿಡಿಡಿಎಸ್ ಗೆ ಮಾಹಿತಿ‌ ನೀಡಲಾಗಿತ್ತು. ಅವರು ನಾಲ್ಕು ಹಂತದಲ್ಲಿ ಬಾಕ್ಸ್ ಗಳನ್ನು ಪರಿಶೀಲಿಸಿದರು. ಸ್ಫೋಟಕ ಇಲ್ಲವೆಂಬ ವಿಚಾರ ಖಾತರಿಯಾದ ಬಳಿಕ ಸೋಮವಾರ ಬೆಳಗಿನ ಜಾವ 2.40ಕ್ಕೆ ಮೊದಲ ಸ್ಪೋಟ ಮಾಡಲಾಗಿದೆ. ನಂತರ, 3.30ಕ್ಕೆ ಎರಡನೇ ಸ್ಫೋಡ ಮಾಡಿ ಬಾಕ್ಸ್ ತೆರೆಯಲಾಗಿದೆ. ಅದರಲ್ಲಿ ನ್ಯೂಸ್ ಪೇಪರ್ ಮತ್ತು ಬಿಳಿ‌ ಬಣ್ಣದ ಪೌಡರ್ ಇರುವುದು ಖಚಿತವಾಗಿದೆ. ತಕ್ಷಣ ಎಲ್ಲ ಪದಾರ್ಥ ಮತ್ತು ಬಾಕ್ಸ್ ಗಳನ್ನು ಬಿಡಿಡಿಎಸ್ ತಂಡ ವಶಪಡಿಸಿಕೊಂಡಿದೆ. ನಂತರ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿ ಪರಿಶೀಲನೆಯ ಬಳಿಕ ಬಾಕ್ಸ್ ನಲ್ಲಿದ್ದ ಪದಾರ್ಥದ ಬಗ್ಗೆ ವೈಜ್ಞಾನಿಕ ಮಾಹಿತಿ ಲಭ್ಯವಾಗಲಿದೆ.
ಟೇಬಲ್‌ ಸಾಲ್ಟ್ ಸೀಜ್
ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ಅವರು ‘ಬಾಕ್ಸ್ ನಲ್ಲಿರುವುದು ಟೇಬಲ್‌ ಸಾಲ್ಟ್ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಪ್ರಕರಣದ ಬಗ್ಗೆ ವಿಚಾರಣೆ ಮತ್ತು ವರದಿ ಬಂದ ನಂತರ ಇನ್ನಷ್ಟು ಮಾಹಿತಿ‌ ತಿಳಿಯಲಿದೆ’ ಎಂದು ಹೇಳಿದರು.
ಮುಖಕ್ಕೆ‌ ಹಚ್ಚುವ ಪೌಡರ್ ಅಂತೂ ಅಲ್ಲ!
ಎರಡು ಹೊಸ ಟ್ರಂಕ್ ಪತ್ತೆಯಾಗಿವೆ. ಒಂದೊಂದು ಟ್ರಂಕ್ ನಲ್ಲಿ ಎರಡೆರಡು ಬ್ಯಾಗ್ ಗಳಿವೆ. ಪೇಪರ್ ಹಾಕಿ ಕವರ್ ಮಾಡಲಾಗಿದೆ. ಬಿಳಿ ಬಣ್ಣದ ಪೌಡರ್ ಪತ್ತೆಯಾಗಿದೆ. ಖಂಡಿತ ಮುಖಕ್ಕೆ ಹಚ್ಚಿಕೊಳ್ಳುವ ಪೌಡರ್ ಅಂತೂ ಅದಲ್ಲ‌. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ‌ ಪರಿಗಣಿಸಬೇಕು ಎಂದು ಶಾಸಕ‌ ಚನ್ನಬಸಪ್ಪ ಆಗ್ರಹಿಸಿದರು.

BDDS Bomb squad railway station

ಇದುವರೆಗಿನ ಬೆಳವಣಿಗೆಗಳೇನು?

  1. ಬೆಳಗ್ಗೆ 11 ಗಂಟೆ ಹೊತ್ತಿಗೆ ಆಟೋ‌ ಚಾಲಕನೊಬ್ಬ ಅನುಮಾನಾಸ್ಪದವಾಗಿ ಬಿದ್ದಿದ್ದ ಎರಡು ಬಾಕ್ಸ್ ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಗತರಾದ ಪೊಲೀಸ್ ಸಿಬ್ಬಂದಿ ಶ್ವಾನದಳದೊಂದಿಗೆ ಪರಿಶೀಲಿಸಿದ್ದಾರೆ. ಎಎಸ್.ಟಿ ತಂಡ ಸಹ ಬಾಕ್ಸ್ ಒಳಗೇನಾದರೂ ಸ್ಫೋಟಕಗಳಿರಬಹುದೇ ಎಂಬ ಶಂಕೆಯ ಆಧಾರದ ಮೇಲೆ ಪರಿಶೀಲಿಸಿದೆ.
  2. ರಾತ್ರಿ 9ರ ಆಸುಪಾಸು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿರುವ bomb detection and disposal squads (BDDS) ಸಿಬ್ಬಂದಿ ಬಾಕ್ಸ್ ಗಳನ್ನು ಅತ್ಯಾಧುನಿಕ ಉಪಕರಣಗಳಿಂದ ಪರಿಶೀಲನೆಗ ಒಳಪಡಿಸಿದರು.‌ ಐದು ಜನರಿರುವ ಬಿಡಿಡಿಎಸ್ ತಂಡವು ಸ್ಥಳಕ್ಕೆ ದೌಡಾಯಿಸಿ ಸ್ಥಳದಲ್ಲಿ ನಡೆದ ಘಟನೆ, ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅಲ್ಲೇನು ನಡೆದಿದೆ ಎನ್ನುವ ಸ್ಪಷ್ಟತೆ ಪಡೆದು ಕಾರ್ಯಾಚರಣೆ.
    ರಾತ್ರಿ 10 ಗಂಟೆ ಬಳಿಕ ಮಳೆರಾಯನ ಅಡ್ಡಿ ಉಂಟುಮಾಡಿದ.‌ ರಾತ್ರಿ 12 ಗಂಟೆಯಾದರೂ ಬಾಕ್ಸ್ ಮಿಸ್ಟ್ರಿ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ.
  3. ಬೆಳಗಿನ‌ ಜಾವ 2.40ಕ್ಕೆ ಮೊದಲ ಸ್ಪೋಟ ಮಾಡಿ ಟ್ರಂಕ್ ಓಪನ್ ಮಾಡಿದ ಬಾಂಬ್ ನಿಷ್ಕ್ರಿಯ ತಂಡ. 3.30ಕ್ಕೆ ಎರಡನೇ ಸ್ಫೋಟ ಮಾಡಿ ಬಾಕ್ಸ್ ತೆರೆದರು. ಅದರಲ್ಲಿ ನ್ಯೂಸ್ ಪೇಪರ್ ಮತ್ತು ಬಿಳಿ‌ ಬಣ್ಣದ ಪೌಡರ್ ಇರುವುದು ಖಚಿತ.
  4. ಟ್ರಂಕ್ ಗಳನ್ನು ಅಲ್ಲಿ ಅನ್ ಲೋಡ್ ಮಾಡಿದವರು ಪೊಲೀಸರ ಸೆರೆಗೆ. ಟ್ರಂಕ್ ಮತ್ತು ಬಿಳಿಬಣ್ಣದ ಪೌಡರ್ ಅಥವಾ ಅಡುಗೆ ಉಪ್ಪನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ‌ ರವಾನೆ.

error: Content is protected !!