Railway station | ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅನಾಮಧೇಯ 2 ಬಾಕ್ಸ್ ಪತ್ತೆ, ಪೊಲೀಸರ ಬಿಗಿ ಬಂದೋಬಸ್ತ್

shivamogga Railway station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರೈಲ್ವೆ ನಿಲ್ದಾಣದಲ್ಲಿ‌ ಎರಡು ಅನಾಮಧೇಯ ಬಾಕ್ಸ್ ಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ತಕ್ಷಣ ಬಾಂಬ್ ಶೋಧ ದಳ, ಶ್ವಾನ ದಳ‌ ಸ್ಥಳಕ್ಕೆ ದೌಡಯಿಸಿದೆ. ಪರಿಶೀಲನೆ ಮಾಡಲಾಗುತ್ತಿದೆ.

READ | ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನೇಣಿಗೆ ಶರಣಾಗಿದ್ದ ಬಾಲಕಿ, ಆರೋಪಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್

ರೈಲ್ವೆ ನಿಲ್ದಾಣದ ವಾಹನ ನಿಲುಗಡೆ (parking) ಸ್ಥಳದಲ್ಲಿ ದಿಕ್ಕಿಲ್ಲದೇ ಬಾಕ್ಸ್ ಗಳು ಬಿದ್ದಿದ್ದು, ಆಟೋ ಚಾಲಕರು ಅವುಗಳ‌ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಕ್ಸ್ ಗಳನ್ನು ಗೋಣಿಚೀಲದಿಂದ ಸುತ್ತಲಾಗಿದೆ. ಬಾಕ್ಸ್ ಗಳ ಸುತ್ತ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ಬ್ಯಾರಿಕೇಡ್ ಹಾಕಲಾಗಿದೆ.
ಬಾಕ್ಸ್ ಪರಿಶೀಲಿಸುವ ಉದ್ದೇಶದಿಂದ ಬೆಂಗಳೂರಿನಿಂದ ವಿಶೇಷ ತಂಡ ಆಗಮಿಸಲಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

error: Content is protected !!